ಬೆಳಕಿನೆಡೆ

ಸ ಮ ಯ

ನಿಮ್ಮ ಗಳಿಕೆಯ ಅತ್ಯಂತ ದುಬಾರಿ ವಸ್ತು.

ಸಾವಿನ ದೇವ ಅವನ ಬಳಿ ತನ್ನೊಡನೆ ಕರೆಯಲು ಬಂದಾಗ ಕುಬೇರನಿನ್ನೂ ಹೊರಡಲು ತಯಾರಾಗಿರಲಿಲ್ಲ.

ಅವನೆಂದ “ನಾನಿನ್ನೂ ಇಲ್ಲಿಂದ ತೆರಳಲು ಮನಸ್ಸನ್ನು ತಯಾರಿ ಮಾಡಿಕೊಂಡಿಲ್ಲ, ನಾನು ನಿನ್ನ ಜತೆ ಬರುವುದು ಸ್ವಲ್ಪ ತಡವಾದರೆ ಏನಾದರೂ ತೊಂದರೆ ಇದೆಯೇ..?
ದೇವನೆಂದ ” ಕ್ಷಮಿಸು ಬಾಳಾ, ನಿನ್ನ ಸಮಯ ಮುಗಿಯಿತು ನೀನು ನನ್ನ ಜತೆ ಹೊರಡಲೇ ಬೇಕೀಗ.”
ಕುಬೇರನೆಂದ ” ನೀನು ಯಾರ ಜತೆ ಮಾತನಾಡುತ್ತಿದ್ದೀಯಾ ಅಂತ ಗೊತ್ತು ತಾನೇ.?, ನಾನು ಕುಬೇರ, ಪ್ರಪಂಚದಲ್ಲೇ ಅತ್ಯಂತ ಧನಿಕರ ಸಾಲಿನಲ್ಲಿ ನಿಂತವ.”
ಆಗ ದೇವ ಹೇಳಿದ ” ನನ್ನ ಗುರಿ ನೀನು ಮಾತ್ರ, ಈಗಲೇ ನನ್ನ ಜತೆ ಹೊರಡು”
ಕುಬೇರನೆಂದ ” ನಾನು ಒಂದು ವೇಳೆ ನನ್ನ ಹತ್ರ ವಿರುವ ಐಶ್ವರ್ಯ ದ ಹತ್ತು ಪ್ರತಿಶತ (ಅದೇ ಲಕ್ಷ ಕೋಟಿಗಿಂತ ಜಾಸ್ತಿ ಬರುತ್ತೆ,_) ಕೊಟ್ಟರೆ ಒಂದು ವರ್ಷ ನನಗೆ ರಿಯಾಯಿತಿ ಕೊಡಬಲ್ಲೆಯಾ..?
ದೇವನೆಂದ “ಕುಬೇರಾ ನೀನು ನನ್ನ ಎಚ್ಚರಿಕೆಯನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ ಅಂತ ಕಾಣುತ್ತೆ, ಇದು ಹೊರಡುವ ಸಮಯ ನಿನಗೆ”
ಇನ್ನೂ ಸ್ವಲ್ಪ ಹೊತ್ತು ಕುಬೇರ ರಿಯಾಯಿತಿ ಪಡೆಯಲು ತನ್ನೆಲ್ಲಾ ಅಮಿಷಗಳನ್ನೊಡ್ಡುತ್ತಾ ಕೊನೆಗೆಂದ

” ದೇವಾ, ನಾನು ನನ್ನೆಲ್ಲಾ ಆಸ್ತಿ ಐಶ್ವರ್ಯಗಳನ್ನು ನಿನಗೆ ಕೊಟ್ತರೆ ನನ್ನ ಹೆಂಡತಿ ಮಕ್ಕಳೊಂದಿಗೆ ಮಾತನಾಡಲು ಐದು ನಿಮಿಷ.. ಬರೇ ಐದು ನಿಮಿಷ ದಯಪಾಲಿಸುತ್ತೀಯಾ..? ನಾನು ಅವರನ್ನು ಕರೆದು ನಾನವರನ್ನು ಪ್ರೀತಿಸುತ್ತೇನೆ ಅಂತ ಹೇಳುತ್ತೇನೆ ಅಷ್ಟೆ. ಇಷ್ಟರವರೆಗೆ ನನಗೆ ಅವರಲ್ಲಿ ಈ ಮಾತನ್ನು ಹೇಳಲು ಸಮಯವೇ ಸಿಕ್ಕಿರಲಿಲ್ಲ, ನೀನು ಅಪ್ಪಣೆಯಿತ್ತರೆ ನಾನು ಅವರನ್ನು ಎಷ್ಟು ಪ್ರೀತಿಸುತ್ತೇನೆ ಅಂತ ಅವರಿಗೆ ಮನದಟ್ಟು ಮಾಡುತ್ತೇನೆ, ಮತ್ತು ನಾನು ಅತ್ಯಂತ ಜಾಸ್ತಿ ನೋಯಿಸಿದ ಇಬ್ಬರನ್ನು ಕಂಡು ಕ್ಷಮೆ ಯಾಚಿಸ ಬೇಕು.

ಬರೇ ಈ ಎರಡು ಕೆಲಸ ಮಾಡಲು ನನಗೆ ಐದು ನಿಮಿಷ ನೀನು ಕೊಡಲೇ ಬೇಕು.

ಅಚ್ಚರಿಯಿಂದ ಸಾವಿನ ದೇವ ಕೇಳಿದ ” ಕುಬೇರ ನೀನು ಈ ನಿನ್ನ ಹತ್ರವಿರೋ ಆಸ್ತಿ ಸಂಪಾದಿಸಲು ಎಷ್ಟು ಸಮಯ ತೆಗೆದುಕೊಂಡೆ?

ಹೆಮ್ಮೆಯಿಂದ ಕುಬೇರನೆಂದ “ನಾಲವತ್ತು ವರುಷಗಳು… ನನ್ನ ಜೀವಮಾನದ ಅತ್ಯಂತ ದುರ್ಲಭ ನಲ್ವತ್ತು ವರ್ಷದ ಗಳಿಕೆ ಯಿದು ಗೊತ್ತೇ , ಈಗ ಅದನ್ನೇ ನಾನು ನಿನಗೆ ಕೊಡುತ್ತಿರುವುದು ಅದೂ ಬರೇ ಐದು ನಿಮಿಷಕ್ಕಾಗಿ, ಇಡೀ ಜೀವಮಾನದಲ್ಲಿ ಇನ್ನು ನೀನು ಕೆಲಸ ಮಾಡಿ ಗಳಿಸುವ ಅಗತ್ಯವಿಲ್ಲ”

ಸಾವಿನ ದೇವತೆ ತನ್ನ ತಲೆಯಲುಗಿಸಿದ ” ನನಗೆ ನಿಮ್ಮ ಈ ಮಾನವ ಮನಸ್ಸಿನ ಅಂತರಾಳ ಅರ್ಥವಾಗುತ್ತಿಲ್ಲ, ನಿನ್ನ ಜೀವನದ ನಾಲವತ್ತು ವರುಷಗಳ ಗಳಿಕೆಯನ್ನೂ ನೀನು ಹೀಗೆ ಕೆಲವೇ ನಿಮಿಷಗಳಿಗಾಗಿ ಖರ್ಚು ಮಾಡಲು ಸಿದ್ಧವಿರುವವ ನಿನ್ನ ಮೊದಲಿನ ಸಮಯವನ್ನು ಇದಕ್ಕಾಗಿ ಯಾಕೆ ವಿನಿಯೋಗಿಸಲಿಲ್ಲ..? ನಿನ್ನ ಕಾಲವನ್ನು ಹೇಗೆ ಕಳೆದೆ..? ನಿಜವಾಗಿಯೂ ನಿನ್ನ ಅವಶ್ಯಕತೆಗಳಿಗನುಸಾರವಾಗಿ ಆಧ್ಯತೆಗಳನ್ನು ಯಾಕೆ ನಿರ್ಧರಿಸಿರಲಿಲ್ಲ? ನಿನ್ನ ಭಾಧ್ಯತೆಗಳನ್ನು ಅಧ್ಯತೆಗಳನುಸಾರವಾಗಿ ಈ ಮೊದಲು ಯಾಕೆ ಕೆಲಸ ಮಾಡಲಿಲ್ಲ..?”
ಆಗಲೇ ಬೆಳಕು ಆರಿ ಎಲ್ಲ ಕಡೆ ಕತ್ತಲು ಹರಡಿತು.

ಕುಬೇರನ ನೂರು ಲಕ್ಷ ಕೋಟಿ ಗಳಿಕೆಯೂ ಅವನಿಗೆ ಕೊನೆ ಗಳಿಗೆಯಲ್ಲಿ ಬೇಕಾದ ಐದು ನಿಮಿಷಗಳನ್ನು ದಯಪಾಲಿಸಲಾಗಲಿಲ್ಲ…

..(ಆಧಾರ)

Advertisements

ಅಳಿಯುತ್ತಿರುವ ಸಂತತಿ ಗುಬ್ಬಿಗಳಿಗಾಗಿ ಬೆಂಗಳೂರಿನ ಪ್ರಕೃತಿ ಪ್ರೇಮಿಯ ಉಡುಗೊರೆ

 Image

ನಾವೆಲ್ಲಾ ನಮ್ಮ ಜಂಗಮವಾಣಿಯಿಂದಾಗಿಯೋ ಅತಿ ನೇರಳೆ ಕಿರಣಗಳಿಂದಾಗಿಯೋ ಗುಬ್ಬಿಯ ಜಾತಿಯೇ ನಿರ್ನಾಮವಾಯ್ತಲ್ಲ ಅಂತ ಬಾಯಲ್ಲಿ ಮಾತ್ರ ಬೊಗಳುತ್ತಾ ಇರುವಾಗ ಅಲ್ಲೊಬ್ಬರು ಇಲ್ಲೊಬ್ಬರು ನಿಜವಾದ ಪ್ರಕೃತಿ ಪ್ರೇಮಿ ಮಾತಿಲ್ಲದೇ ಕೃತಿಯಲ್ಲಿ ತಾವೇನು ಮಾಡಬಹುದು ಎಂಬುದನ್ನುತೋರಿಸಿಕೊಡುತ್ತಿರುತ್ತಾರೆ.

 

ಅಂತಹ ಒಂದು ದಂಪತಿಗಳ ವಿಷಯ ನಾನಿಲ್ಲಿ ಹೇಳಲು ಬಯಸುತ್ತೇನೆ.

 Image

ಚೆನ್ನೇನ ಹಳ್ಳಿಯ ಶ್ರೀಯುತ ನಾಗರಾಜ ಹೆಬ್ಬಾರ್ ಮತ್ತು ರಾಜೇಶ್ವರಿ ದಂಪತಿ ಗುಬ್ಬಿಗಳಿಗೆಂತಲೇ ಹೊಸದೊಂದು ಮನೆ ನಿರ್ಮಾಣ ಮಾಡಿ ತಮ್ಮ ಮನೆಯಲ್ಲಿಯೇ ಅವುಗಳಿಗೆ ಶಾಶ್ವತ ನೆಲೆ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಿಟ್ಟಿದ್ದಾರೆ .

 Image

ಗುಬ್ಬಿ ದಂಪತಿಗಳು ತಾವು ಬೆಳೆಯುವದಲ್ಲದೇ ತಮ್ಮ ಹೊಸ ನೆಲೆಯಲ್ಲಿ ತಮ್ಮ ಸರೀಕರಿಗೂ ದಾರಿ ತೋರಿಸಿಕೊಟ್ಟಿದ್ದು ಆಗಾಗ್ಗೆ ತಮ್ಮ ಸರಿಕರನ್ನೂ ಕರೆತಂದು ತೋರಿಸುತ್ತಿರುವರಂತೆ. ಬರೇ ಕೆಲಸಕ್ಕೆ ಬಾರದೇ ಬಿಸಾಡುವ ವಸ್ತುಗಳಿಂದಲೇ ಗುಬ್ಬಿಗಳಿಗಾಗಿ ವಿಶೇಷ ಗೂಡು ನಿರ್ಮಾಣ ಮಾಡಿಟ್ಟಿದ್ದು, ಗುಬ್ಬಿಗಳೂ ಅವರ ಈ ಶ್ರಮಕ್ಕೆ ತಮ್ಮ ಸ್ನೇಹ ಪರತೆ ಮೆರೆದು ಅವರ ಔದಾರ್ಯಕ್ಕೆ ತಕ್ಕ ಅಭಿನಂದನೆಗಳನ್ನು ಸ್ವೀಕರಿಸಿವೆ.

 

ನಾಗರಾಜರ ಧರ್ಮ ಪತ್ನಿ ರಾಜೇಶ್ವರಿಯವರು ಹೇಳುವಂತೆ ಅವುಗಳ ಚಿಲಿಪಿಲಿಯೇ ಇವರಿಗೆ ಬೆಳಗಿನ ಸುಪ್ರಭಾತವಂತೆ. ಬೆಳಗಿನ ೬ ಗಂಟೆಗೆ ಇವರು ಬಾಗಿಲು ತೆರೆಯದಿದ್ದರೆ ಚಿಲಿಪಿಲಿ ಗಲಾಟೆ ಮಾಡುತ್ತ ಕರೆಯುತ್ತವಂತೆ,

 

ನಿಮಗೆ ಗೊತ್ತಾ, ಅವರು ಹೇಳುತ್ತಾರೆ” ಬೆಳಗಿನ ಏಳು ಗಂಟೆಗೆ ಹೊರಗೆ  ಇಟ್ಟಿರುವ ಜಲ ಸಸ್ಯವಿರುವ ಪ್ಲಾ ಸ್ಟಿಕ್ ಜಗ್ ನಲ್ಲೇ ಅವುಗಳ್ ಸ್ನಾನವಂತೆ”  ತಮ್ಮ ಸಂಭಂದಿಕರನ್ನೂ ಆಗಾಗ್ಗೆ ಕರೆತಂದು ಇವರಿಗೆಲ್ಲಾ ತೋರಿಸುತ್ತಿರುವವಂತೆ. ತಮ್ಮ ಮನೆಯ ಹೊರಗಡೆ ಇರುವ ಪುಟ್ಟ ಜಾಗದಲ್ಲೆ ಚಿಕ್ಕ ಕೈತೋಟ ಮಾಡಿಕೊಂಡು ಸದಾ ಹಸಿರನ್ನು ಕಾಪಾಡುತ್ತಾ ಬರುತ್ತಿರುವ ಇವರು ತೋಟದಲ್ಲೇ ಪುದಿನ, ಬ್ರಾಹ್ಮಿ, ಲೋಳೆರಸ( ಅಲೋವೆರಾ ) ದಾಸವಾಳ, ಗುಲಾಬಿ ಜಾಜಿ, ಮಲ್ಲಿಗೆ ಸೇವಂತಿಗೆ ಹೀಗೆ ತರಹೇವಾರಿ ಹೂಗಿಡಗಳನ್ನೂ, ಬಸಲೆ, ತೊಂಡೆ, ಹರಿವೆ ಇತ್ಯಾದಿ ತರಕಾರಿಗಳನ್ನೂ ಅಮ್ರತ ಬಳ್ಳಿ , ವೀಳ್ಯದ ಎಲೆ, ಅಡಿಕೆ ಬೆಳೆಯುವ ಕರಿ ಬೇವು ಬಾಳೆ  ಹಾಗು ಪಪ್ಪಾಯಿ ಹವ್ಯಾಸ ತಮ್ಮ ಹಳ್ಳಿಯ ಜೀವನವನ್ನು ನೆನೆಯುತ್ತ ಮೆರೆಸುವ ಪ್ರಯತ್ನ ಮಾಡುತ್ತಿದ್ದಾರೆ.

 

ಮಗ ಕಾಲೇಜಿಗೆ ಹೋಗುತ್ತಾನೆ, ಪತಿ ಕೋಡಿಗೆ ಹಳ್ಳಿ ಜ್ಞಾನಶಕ್ತಿ ಸುಭ್ರಮಣ್ಯ ದೇವಾಲಯದಲ್ಲಿ ಮೆನೇಜರ್, ಇಬ್ಬರೂ ಹೊರ ಹೋದಾಗ ರಾಜೇಶ್ವರಿಯವರಿಗೆ ಈ ಗುಬ್ಬಿ ದಂಪತಿಗಳೇ ಏಕಾಂತದ ಸಂಗಾತಿಗಳು.ಅವುಗಳ ಚಿಲಿಪಿಲಿಯೇ ಅವರಿಗೆ ಪ್ರಾಕ್ರತಿಕ ಮನರಂಜನೆ.

Image

ಐದಾರು ತಿಂಗಳ ಹಿಂದೆ ಕಾಳು ತಿನ್ನಲು ಬಂದ ಗುಬ್ಬಿಯನ್ನು ನೋಡಿದಾಗ ನಾಗರಾಜರವರಿಗೊಂದು ಆಲೋಚನೆ ಬಂತು. ಈ ಗುಬ್ಬಿಗಳ ವಿಶೇಷ ಬಂಗಲೆಯನ್ನು ಕಟ್ಟಿಕೊಟ್ಟು ಅವಕ್ಕೆ ಶಾಶ್ವತವಾಗಿ ತಮ್ಮಲ್ಲೇ ನಿಲ್ಲಿಸಿಕೊಳ್ಳುವ ಯೋಜನೆಯದು. ಮೊದ ಮೊದಲು ಕಾಳು ಮಾತ್ರ ತಿನ್ನಲು ಬರುತ್ತಿದ್ದ ಗುಬ್ಬಿಯೊಂದು ಕೆಲವೇ ದಿನಗಳಲ್ಲಿ ತನ್ನ ಸಂಗಾತಿಯನ್ನೂ ಕರೆದು ಕೊಂಡು ಬಂದು ಶಾಶ್ವತವಾಗಿ ಇಲ್ಲಿ ನೆಲೆಯೂರುವ ಯೋಜನೆಯನ್ನೇ ಕೈಗೆತ್ತಿಕೊಂಡಿತ್ತು.

 

 Image

 

ನಾಚಿಕೆ ಸ್ವಭಾವದ ಇವುಗಳು ನಮ್ಮನ್ನು ( ಮನುಜರನ್ನು) ಆಶ್ರಯಿಸಿಯೇ ಬದುಕುತ್ತವೆ. ಹಳ್ಳಿಗಳಲ್ಲಿ ಎಲ್ಲಾ ಕಡೆ ಚಿವ್ ಚಿವ್ ಎನ್ನುತ್ತಾ ಕಾಲ ಕಳೆಯುವ ಇವುಗಳು ರೈತರ ಮಿತ್ರ.

 Image

 Image

ಇಂತವರು ನಮಗೆಲ್ಲರಿಗೂ ಮಾದರಿ. ಇಂತಹ ಪ್ರಕೃತಿ ಪ್ರೇಮಿಗಳಿರುವುದು ಅಳಿವ ಸಂತತಿಗಳಿದೆ ವರದಾನ.  ಇಂತಹ ಪ್ರಕೃತಿ ಪ್ರೇಮಿಗಳ ಸಂತತಿಯೂ ಅಳಿಯುತ್ತಿರುವ ಜೀವ ರಾಶಿಗಳೂ ವೃದ್ಧಿಸಲಿ. ನಮ್ಮೆಲ್ಲರ ವತಿಯಿಂದ ಈ ಪ್ರಕೃತಿ ಪ್ರೇಮಿಗಳಿಗೆ ನಮನ.

ನಂಬುಗೆಯ ಶಕ್ತಿ !!!

 

 

 

ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ. 
ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ ಮೇಲಿಟ್ಟು ಕುಳಿತಿದ್ದ,  ಸಹಾಯದ ಏನಾದರೂ ಹೊಸ ಕಿರಣ ಸಿಗಬಹುದೇ ಎಂದು ಯೋಚಿಸುತ್ತಾ….
ಅಕಾಸ್ಮಾತ್ತಾಗಿ ಒಬ್ಬ ವೃದ್ಧ ಆತನೆದುರಿಗೆ ಬಂದು ಕೇಳಿದ ” ಏನು … ತುಂಬಾ ಚಿಂತೆಯಲ್ಲಿರೋ ಹಾಗಿದೆ?” 
ಈತ ತನ್ನ ಕಷ್ಟಗಳನ್ನೆಲ್ಲಾ ಅವನಿಗೆ ತಿಳಿಸಿದ.  
ತುಂಬಾ ಸಮಾಧಾನದಿಂದ ಕೇಳಿದ ವೃದ್ಧ ” ನಾನು ನಿನಗೆ ಸಹಾಯ ಮಾಡ ಬಲ್ಲೆ ಎನ್ನಿಸುತ್ತಿದೆ” ಎಂದ
ಈತನ ಹೆಸರು ಕೇಳಿದ ವೃದ್ಧ ಒಂದು ಚೆಕ್ ಬರೆದು ಆತನ ಕೈಗಿತ್ತು ಹೇಳಿದ ” ಇಗೋ ಇದನ್ನು ತೆಗೆದುಕೋ, ಇವತ್ತಿಂದ ಸರಿಯಾಗಿ ಒಂದು ವರುಷದ ಬಳಿಕ ನಾವು ಇದೇ ಜಾಗದಲ್ಲಿ ಸಿಗೋಣ, ಆಗ ನೀನು ಈ ಹಣ ನನಗೆ ವಾಪಾಸ್ಸು ಕೊಟ್ಟರೆ ಸಾಕು” ಎಂದ.
ಆತ ಹೇಗೆ ಬಂದಿದ್ದನೋ ಹಾಗೇ ವಾಪಾಸ್ಸು ಹೋದ.
ಈತ ತನ್ನ ಕೈಯ್ಯಲ್ಲಿದ್ದ ಚೆಕ್ ನೋಡಿದ, ಅದು ೫,೦೦,೦೦ ಡಾಲರ್ ಚೆಕ್, ರುಜು ಹಾಕಿದಾತ ಆಗಿನ ಅತ್ಯಂತ ದೊಡ್ಡ ಶ್ರೀಮಂತರ ಸಾಲಿನ ಜೋನ್ ಡಿ ರಾಕ್ ಫೆಲ್ಲರ್.
“ನನ್ನ ಜೀವನದ ಅತ್ಯಂತ ಯಾತನಾಮಯ ದಿನಗಳು ತೊಲಗಿದವು” ಈತನೆಂದುಕೊಂಡ, 
ಆದರೆ ಆತನು ಆತ ಈ  ಚೆಕ್ಕನ್ನು ತನ್ನ ತಿಜೋರಿಯಲ್ಲಿಯೇ ಇಟ್ಟುಕೊಂಡು, ಅದು ತನ್ನ ಬಳಿಯಿದೆ ಎನ್ನುವ ಯೋಚನೆಯೇ ತನಗೆ ತನ್ನ ಬುಸಿನೆಸ್ ನಲ್ಲಿ ಈ ದುರ್ವಿಧಿಯಿಂದ ಪಾರಾಗಲು ಏನಾದರೊಂದು ಹೊಸ ಯೋಚನೆ ಹೊಳೆಸೀತು ಎಂದುಕೊಂಡ.
ಅದು ಹಾಗೆಯೇ ಆಯ್ತು, ಆತನ ಈ ಹೊಸ ಆಲೋಚನೆಯೇ ಆತನ ವ್ಯಾಪಾರೀ ಮನೋಭಾವನೆಯನ್ನು  ಎದ್ದೇಳಿಸಿ ಹೊಸ ಶಕ್ತಿ ತುಂಬಿತು ಮತ್ತು ಕೆಲವೇ ತಿಂಗಳಲ್ಲಿ ಆತ ತನ್ನ ಹಳೆಯ ಸಾಲದಿಂದ ಮುಕ್ತನಾಗಿದ್ದ, ಮತ್ತು ಆತನ ಲಾಭ ದ್ವಿಗುಣವಾಗತೊಡಗಿತು.
ಸರಿಯಾಗಿ ಒಂದು ವರುಷದ ಬಳಿಕ ಆತ ಅದೇ ಪಾರ್ಕನಲ್ಲಿ ಹಳೆಯ ಚೆಕ್ ಹಿಡಿದುಕೊಂದು ಆ ವೃದ್ಧನಿಗಾಗಿ ಕಾಯುತ್ತಿದ್ದ. ಹೇಳಿದ ಸಮಯಕ್ಕೆ ಸರಿಯಾಗಿ ಆ ವೃದ್ಧ ಹಾಜರಾಗಿದ್ದ.
ಆದರೆ ಇನ್ನೇನು ವ್ಯಾಪಾರಿ ತನ್ನ ಏಳಿಗೆಯ ಕಥೆ ಅವನಿಗೆ ಹೇಳಿ ಧನ್ಯವಾಅದಾ ಸಮರ್ಪಿಸಿ ಅವನ  ಚೆಕ್ ವಾಪಾಸು ಕೊಡಬೇಕೆಂದು ಕೊಂಡಿದ್ದ. 
ಅಷ್ಟರಲ್ಲಿ ಒಬ್ಬ ದಾದಿ ಓಡುತ್ತ  ಬಂದು ಆ ವೃದ್ಧನನ್ನು ಹಿಡಿದುಕೊಂಡಳು.
“ಅಂತೂ ನಾನು ಅವನನ್ನು ಹಿಡಿದು ಬಿಟ್ಟೆ, ಆತನು ನಿಮಗೇನೂತೊಂದರೆ ಕೊಡಲಿಲ್ಲ  ತಾನೇ, ಆತ ವೃದ್ಧಾಶ್ರಮದಿಂದ ತಪ್ಪಿಸಿಕೊಂಡು ಬಂದು ತಾನು ಶ್ರೀಮಂತ ಜೋನ್ ಡಿ ರಾಕ್ ಫೆಲ್ಲರ್ ಎಂದೇ ಹೇಳುತ್ತಾನೆ” ಹೇಳಿ ಆಕೆ ಆತನನ್ನು ತನ್ನ  ಜತೆ ಕರೆದೊಯ್ದಳು.
ವ್ಯಾಪಾರಿ ಸ್ಥಂಭೀಭೂತನಾದ. 
ಹಾಗಾದರೆ ಇಡೀ ಒಂದು ವರ್ಷ ತನ್ನ ವ್ಯಾಪಾರವನ್ನು ಉತ್ತುಂಗಕ್ಕೇರಿಸಿದ್ದು ತನ್ನ ಹತ್ತಿರವಿದ್ದ  ಈ ೫ ಲಕ್ಷದ ಚೆಕ್ಕೇ ಅಲ್ಲವೇ.
ಆಗಲೇ ಆತನಿಗೆ ಅರಿವಾದದ್ದು ತನ್ನ ವ್ಯಾಪಾರದ ಏಳಿಗೆಗೆ ಕಾರಣ ತನ್ನ ಹತ್ತಿರವಿದ್ದ ಹಣವಲ್ಲ, 
ಬದಲು ಆತನನ್ನು ಹೊಸದಾಗಿ ಹೊಸ ರೀತಿ ಯೋಚಿಸಲು ಪ್ರೇರೇಪಿಸಿದ್ದ ಮಾನಸಿಕ ಶಕ್ತಿ  ಆತನ ನಂಬುಗೆ.

(ನೆಟ್ ಕಥೆ  ಆಧಾರಿತ)

ನಕ್ಕರದೇ ಸ್ವರ್ಗ

ನಕ್ಕರದೇ ಸ್ವರ್ಗ

ಸಿಪ್ಪೆ ಸಮೇತ ತಿನ್ನುವುದು

” ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು”

” ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?”
” ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿತವಾಗಿರುತ್ತವೆ.”

ನನ್ನದಲ್ಲ ನಮ್ಮದು

“ನನ್ನ ಮಕ್ಕಳು, ನನ್ನ ಮನೆ, ನನ್ನ ಗಾಡಿ ಅಂತ ಹೇಳ್ತಾ ಇರ್ತೀಯಲ್ಲ ಎಲ್ಲವೂ ನಿನ್ನದೇನಾ? ನಾನೂ ನಿನ್ನೊಟ್ಟಿಗೇ ಇದ್ದೇನೆಂದು ನಿಮಗೆ ಅನ್ನಿಸೋಲ್ವಾ?” ಸಿಟ್ಟಾಗಿ ಕೇಳಿದಳು ತ್ಯಾಂಪಿ ಗಂಡನನ್ನೊಮ್ಮೆ.

” ಹಾಗಾದರೆ ನಾನು ಏನು ಮಾಡಬೇಕು ಅಂತ ನಿನ್ನ ಮಾತಿನ ಅರ್ಥ?” ಕೇಳಿದ ತ್ಯಾಂಪ.
“ಯಾವಾಗಲೂ ನನ್ನ ಅನ್ನುವ ಬದಲಿಗೆ ನಮ್ಮ ಅಂತ ಹೇಳಿ ನೋಡಿ ಎಷ್ಟು ಚೆನ್ನಾಗಿರುತ್ತೆ ಅಂತ”.
“ಸ್ಸರಿ ಇನ್ನು ಮುಂದೆ ಹಾಗೆಯೇ ಹೇಳುತ್ತೇನೆ” ಎಂದ ತ್ಯಾಂಪ.

ಮಾರನೆಯ ದಿನ ತ್ಯಾಂಪ ಏನೋ ಹುಡುಕುತ್ತಿರುವುದನ್ನು ಕಂಡು “ರ್ರೀ ಅಷ್ಟೊತ್ತಿಂದ ಏನು ಹುಡುಕುತ್ತಾ ಇದ್ದೀರಿ” ಕೇಳಿದಳು ತ್ಯಾಂಪಿ.
” ಲೇಯ್ ನನ್ನ ಅಲ್ಲಲ್ಲ ನಮ್ಮಒಳಚಡ್ಡಿ ಸಿಕ್ತಾ ಇಲ್ಲ, ನೋಡಿದೆಯಾ?” ಕೇಳಿದ ತ್ಯಾಂಪ.<–break->

ಚಿಲ್ಲರೆ ಇರಲಿಲ್ಲ

ವೃಧ್ದರು : ನೀನು ತುಂಬಾ ಒಳ್ಳೆಯ ಜಾಣ ಹುಡುಗನಪ್ಪಾ. ಆದರೆ ನಾನು ಕಳೆದು ಕೊಂಡಿರುವುದು ಹತ್ತು ರೂ ನ ಐದು ನೋಟುಗಳಲ್ಲ, ಬದಲಿಗೆ ಐವತ್ತು ರೂ ನ ಒಂದು ನೋಟು ಮರಿ.
ಹುಡುಗ: ಅದು ನನಗೆ ಗೊತ್ತಿದೆ ಸಾರ್, ಆದರೆ ಕಳೆದ ಸಾರಿ ನಾನು ಹೀಗೇ ಒಬ್ಬರಿಗೆ ಅವರ ನೋಟನ್ನು ಹುಡುಕಿ ಕೊಟ್ಟಾಗ, ಅವರ ಬಳಿ ಚಿಲ್ಲರೆಯೇ (ನನಗೆ ಕೊಡಲು) ಇರಲಿಲ್ಲ.

ಬಿಸ್ಲರಿ ನೀರು

ಸ್ನೇಹಿತ ಸರ್ದಾಜಿಯ ಮನೆಗೊಮ್ಮೆ ಹೋಗಿದ್ದೆ,
“ನೀವು ಕುಡಿಯುವ ನೀರಿಗಾಗಿ ಏನೆಲ್ಲ ಮುಂಜಾಗೃತಾ ಕೃಮ ತಗೋಳ್ತೀರಿ?” ಕೇಳಿದೆ, ಸುಮ್ಮನೆ.
” ನಾವು ಮೊದಲು ನೀರನ್ನು ಕುದಿಸುತ್ತೇವೆ” ಸರ್ದಾರ್ಜಿಯೆಂದ
” ಅದರಲ್ಲೂ ಕೀಟಾಣುಗಳಿದ್ದರೆ?”ನಾನೆಂದೆ.

” ನಾವು ಅದನ್ನ ಸೋಸುತ್ತೇವಲ್ಲ” ಸರ್ದಾರ್ಜಿಯೆಂದ.
” ಇನ್ನೂ ಉಳಕೊಂಡಿರ್ತವಲ್ಲ” ರೇಗಿಸಿದೆ ನಾನು.
” ಅವು ಅಕ್ವಾಗಾರ್ಡನಲ್ಲೂ ಕ್ಲೀನ್ ಆಗ್ತದಲ್ಲಾ” ತನ್ನ ಪಟ್ಟು ಬಿಡಲಿಲ್ಲ ಸರ್ದಾರ್ಜಿ.
” ಅಂದರೆ ನಿನ್ನ ಮನೆಯ ನೀರು ನಿಸ್ಸಂದೇಹವಾಗಿಯೂ ಶುದ್ಧ ಬಿಡು” ಎಂದೆ ಸಮಾಧಾನದಿಂದ.

” ನಂಗೊತ್ತಿತ್ತು ನಿನ್ನ ಯೋಚನೆ ಇಷ್ಟೇ ಅಂತ, ನಾನೇನ್ ನಿನ್ನಹಾಗೆ ಅಲ್ಲ” ಸರ್ದಾರ್ಜಿ ಮುಂದುವರೆಸಿದ “ನಾವು ಬಿಸ್ಲರಿಯನ್ನೇ ಉಪಯೋಗಿಸುತ್ತೇವೆ ಗೊತ್ತಾ?”

ಭಾರತೀಯರಲ್ಲ

ರಾಮು : ಈ ಪ್ರಪಂಚದ ಜನರೊಳಗೆ ಪ್ರತಿ ಆರರಲ್ಲೊಬ್ಬರು ಭಾರತೀಯರು ಅಂತಾರಲ್ಲಾ, ಅದು ಶುದ್ಧ ಸುಳ್ಳು.

ಮಾಸ್ಟರ್ : ಯಾಕೋ ಹಾಗೇ ಹೇಳ್ತಿ?.
ರಾಮು : ನನ್ನ ಮಾವ ಜಪಾನಿಗೆ ಹೋದಾಗ ಅವರಿಗೆ ಅಲ್ಲಿ ಒಬ್ಬರೇ ಒಬ್ಬ ಭಾರತೀಯನೂ ಸಿಗಲಿಲ್ಲವಂತೆ, ಹಾಗಿರುವಾಗ

ಒಂದೇ ನಂಬರ್ ಯತ್ಯಾಸ!!!
ಪಕ್ಕದಮನೆಯವರ ಮಗಳು ಫಸ್ಟ ರ‍್ಯಾಂಕ್ ಬಂದಳಂತೆ. ತ್ಯಾಂಪಿಯ ಮಗಳೂ ಅವಳದ್ದೇ ಕ್ಲಾಸ್.ಅವರಿಬ್ಬರ ನಡುವೆ ನಡೆಯಿತು ಈ ಸಂಭಾಷಣೆ.

ತ್ಯಾಂಪಿ : ಅಲ್ಲಾ ವಿಮಲಮ್ಮಾ, ನಿಮ್ಮ ಮಗಳಿಗೂ ನನ್ನ ಮಗಳಿಗೂ ಒಂದೇ ನಂಬರ್ ವ್ಯತ್ಯಾಸ.
ವಿಮಲ : ಹೌದಾ? ಹಾಗಾದರೆ ನಿನ್ನ ಮಗಳು ಎರಡನೇ ರ‍್ಯಾಂಕ್ ಇರಬಹುದು ಅಲ್ವಾ ತ್ಯಾಂಪಮ್ಮಾ?
ತ್ಯಾಂಪಿ : ಇಲ್ಲ ವಿಮಲಮ್ಮ!
ವಿಮಲ : ಮತ್ತೆ, ಮೂರನೆಯ ರ‍್ಯಾಂಕ್?
ತ್ಯಾಂಪಿ : ಇಲ್ಲ, ವಿಮಲಮ್ಮ, ಅವಳು ಫೈಲ್?

ವಿಮಲ : ಅದು ಹ್ಯಾಗೆ ಆಗಲು ಸಾಧ್ಯ?
ತ್ಯಾಂಪಿ : ಹಾಂಗೇನಿಲ್ಲ, ನಿಮ್ಮ ಮಗಳ ರೋಲ್ ನಂಬರ್ 486, ನನ್ನ ಮಗಳದ್ದು 485 ಅಷ್ಟೇ.
ವಿಮಲ :………….!!!

ಬೆಳ್ಳಾಲ ಗೋಪಿನಾಥ ರಾವ್

ತ್ಯಾಂಪ ತ್ಯಾಂಪಿಯರ ಸಲ್ಲಾಪ

ಐ ಮಿಸ್ ಯೂ

ಯಾಕೋ ತ್ಯಾಂಪ ತ್ಯಾಂಪಿಯ ಮೇಲೆ ತುಂಬಾನೇ ಕೋಪದಿಂದಿದ್ದ.
ಅವಳ ಚಿತ್ರವನ್ನು ಎದುರಿಗಿಟ್ಟು ಅದಕ್ಕೆ ಚೂರಿ ಎಸೆಯುವ ಪ್ರಾಕ್ಟೀಸ್ ಮಾಡ್ತಾ ಇದ್ದ.
ಪ್ರತಿ ಬಾರಿಯೂ ಮಿಸ್ ಆಗುತ್ತಿತ್ತು ಟಾರ್ಗೆಟ್
ಆಗಲೇ ತ್ಯಾಂಪಿಯ ಕರೆ ಬಂತು.
ರೀ ಏನ್ ಮಾಡ್ತಾ ಇಡ್ದ್ದೀರಾ..?
ತ್ಯಾಂಪ ಸ್ವಲ್ಪವೂ ಯೋಚಿಸದೇ ಉತ್ತರಿಸಿದ:
ನಿನ್ನೇ ಮಿಸ್ ಮಾಡ್ಕೋತಾ ಇದ್ದೆ ಕಣೇ
ನಿನ್ನ ನೋಡಿದರೂ ಸಮಸ್ಯೆಯೇ ಮಾಯ
ತ್ಯಾಂಪಿ: ಡಾಲಿಂ.. ಯಾಕೆ ನೀನು ನನ್ನ ಫೋಟೋ ಹತ್ರಾನೇ ಇಟ್ಕೊಂಡಿರ್ತೀಯಾ, ನಾನೆಂದರೆ ಅಷ್ಟು ಪ್ರೀತಿನಾ ನಿಂಗೆ?
ತ್ಯಾಂಪ : ಹೌದು ಕಣೇ, ಅದ್ಯಾಕೋ ನಿನ್ನ ಚಿತ್ರ ನೋಡಿದರೆ ಸಾಕು, ಎಂತಹ ಸಮಸ್ಯೆಯೂ ಕರಗಿ ನೀರಾಗಿಬಿಡುತ್ತೆ..
ತ್ಯಾಂಪಿ: ನೋಡಿದ್ಯಾ, ನಾನು ನನ್ನ ಚಿತ್ರ ………. ಎಂತಹ ಪವಾಡ ಅಲ್ಲವೇ ನಿನ್ನ ಪಾಲಿಗೆ?
ತ್ಯಾಂಪ: ಎಂತಹಾ ಪವಾಡವೂ ಅಲ್ಲ, ಪ್ರತಿ ಬಾರಿ ಸಮಸ್ಯೆ ಎದುರಾದಾಗಲೆಲ್ಲಾ, ನಿನ್ನ ಫೋಟೋ ನೋಡಿ ಈ ಸಮಸ್ಯೆಗಿಂತ ದೊಡ್ಡದೇನಲ್ಲವಲ್ಲ ಎಂದುಕೊಳ್ಳುತ್ತೇನೆ. ಸಮಸ್ಯೆ ತಕ್ಷಣ ಮಾಯ.

ಇದು ನಿಮಗೆ

ತ್ಯಾಂಪಿ : ನಿಮಗೆ ವೈಫ್ ನ್ ಅರ್ಥ ಗೊತ್ತಾ..?
ತ್ಯಾಂಪ: ಯಾಕೆ ಗೊತ್ತಿಲ್ಲ..?
ತ್ಯಾಂಪಿ: ಹೇಳಿ..!!
ತ್ಯಾಂಪ: ವಿಥೌಟ್ ಇನ್ಪಾರ್ಮೇಶನ್ ಫೈಟಿಂಗ್ ಎವರ್
ತ್ಯಾಂಪಿ: ಅಲ್ಲಲ್ಲ..
ತ್ಯಾಂಪ: ಮತ್ತೆ … ಮತ್ತೆ
ತ್ಯಾಂಪಿ: ನಾನು ಹೇಳಲಾ..?
ತ್ಯಾಂಪ: ಹೇಳು
ತ್ಯಾಂಪಿ: ವಿದ್ ಈಡಿಯಟ್ ಪಾರ್ ಎವರ್

ಬೆಳಿಗ್ಗೆ ಬೆಳಿಗ್ಗೆ ತ್ಯಾಂಪಿ ತ್ಯಾಂಪನ ಬಳಿ ಕಾಫಿ ತಿಂಡಿ ಏನು ಮಾಡಬೇಕೆಂದು ಕೇಳಲು ಬಂದಳು.

ಸಂಜೀವ್ ಕಪೂರ ನ ಖಾನ ಕಜಾನ ನೋಡುತ್ತಿದ್ದ ತ್ಯಾಂಪಿಗೆ ಇದೊಂದು ಅಂಟು ಜಾಡ್ಯ ಎಲ್ಲಿಂದಲೋ ಅಂಟಿ ಕೊಂಡಿತ್ತು.

ಹೀಗೇ ಕೇಳಿದಳು ದೂರದರ್ಶನ ನೋಡುತ್ತಾ..

ಅಲ್ಲರೀ

ತ್ಯಾಂಪ ಖುಷಿಯಾದ..

ಹೇಳು ದಾಲಿಂ

ಅಲ್ಲ ಆ ಬಿಹಾರಿಯವರಿಗೆ ಭಾರತ ರತ್ನ ಸಿಕ್ಕಿತಲ್ಲಾ

ಅಲ್ಲ ಕಣೇ ಹೆಸರಾದರೂ ಸರಿಯಾಗಿ ಹೇಳು ಅವರು ಬಿಹಾರಿ ಅಲ್ಲ. ಅಟಲ್ ಬಿಹಾರಿ

ಎಲ್ಲಾ ಒಂದೇ ಬಿಡಿ, ಅಲ್ಲ ಅವರಿಗೆ ಭಾರತ ರತ್ನ ಸಿಕ್ಕಿತಲ್ಲಾ..

ಹೌದು, ಭಾರತದಲ್ಲಿನ ನಾಗರೀಕರಿಗೆ ಸಿಗೋ ಅತ್ಯುಚ್ಚ ಮೆಡಲ್ ಕಣೇ

ಹೌದು ಅವರಿಗೆ ಯಾಕೆ ಸಿಕ್ಕಿತು ಅಂತ..?

ಅಂದರೆ..?

ಅಲ್ಲ ಅದೇ ಅವರು ಅಂತ ಯಾವ ಕೆಲ್ಸ ಮಾಡಿದರೂ ಅಂತ ..?

ತ್ಯಾಂಪ: ಅವರು ಮದುವೆ ಆಗಲೇ ಇಲ್ಲವಲ್ಲ ಅದಕ್ಕೇ..!!!

…………………

ತದ ನಂತರ ….

ತ್ಯಾಂಪನಿಗೆ ತಿಂಡಿ ಬಿಡಿ…..ಕಾಫೀನೂ ಸಿಗಲಿಲ್ಲವಂತೆ

ಅಂತದ್ದೇನು ಹೇಳಿದೆ ತಾನು ಅಂತ ಅವನಿಗೆ ಅರ್ಥ ಆಗಲೇ ಇಲ್ಲವಂತೆ

ನೀವಾದರೂ ತಿಳಿಸಿ…

ತ್ಯಾಂಪ ಪ್ರಳಯ ಮತ್ತು ಪೈ

Image

ಭಾರೀ ಬೇಜಾರ್ನಲ್ ನಿಂತ್ಕಂಡಿದ್ದ ತ್ಯಾಂಪ
ಏಂತ ಆಯ್ತಾ..?
ಬೆಪ್ತ್ ಕ್ಕಡಿ ಕಣಮ್ಗ್ ನಿಂತಿದ್ದಿಯಲ್ಲೆ ಎಂತ ಆಯ್ತಾ..??
ಸೀನ ಕೇಂಡ
ಎಂತ ಇಲ್ಲೆ ಮಾರಾಯಾ…
ಅಂವ ಹಾಂಗ್ ಅಂದ ಅಂದ್ರ ಏನೋ ಇತ್ ಅಂದೇಳಿ ಅರ್ಥ
ಅಲ್ಲ ಮಾರಾಯಾ, ಈ ಪ್ರಳಯ ಬಪ್ದ್ ಹೌದಾ ಅಂತೇಳಿ
ಎಂತದಾ… ಸೀನನ್ ಮಂಡಿ ಬಿಸಿ ಆಯ್ತ್
ಅಲ್ಲ ಮಾರಾಯಾ ಜಪಾನ್ ಭೂಕಂಪ ಶುರು ಆಯ್ತಂಬ್ರ ಗೊತ್ತಿತ್ತಾ..??
ಅದ್ ಇದ್ದದ್ದೇ ಅಲ್ದನಾ
ಅಲ್ದಾ
ಮತ್ತೆ ಆ ಅದೆಂತದ್ದೋ ಇಲೆಕ್ಟ್ರ್‍ಆನಿಕ್ ಬಾಂಬ್ ಮಾಡ್ರ್ ಅಮೇರಿಕಾದವ್ರ್
ಇಲ್ ಪಾಕಿಸ್ತಾನ ಅದೆಂತದ್ದೋ ಮಿಸಾಯಿಲ್ ಮಾಡ್ತ್ ಅಂಬ್ರಲ್ಲೆ
ಅವ್ರ್ ಅದೆಲ್ಲಾರೂ ನಮ್ ಮೇಲೆ ಹಾಕ್ರೆ..!!??!!
ಅಲ್ದಾನಾ ಇದೆಲ್ಲ ನಿಂಗ್ ಯಾರಾ ಹೇಳದ್
ತ್ಯಾಂಪಿ ಅಣ್ಣ ಮರಾಯಾ….
ಅದಕ್ಕೇ ಎಂತ ಈಗ..??
ಅಲ್ಲಾ, ಇನ್ನೂ ನಾನ್ ಎಂತದೂ ಮಾಡಲ್ಲೆ ಮಟ್ಟಲ್ಲೇ ಈಗ್ಲೇ ನೆಗ್ದ್ ಬಿದ್ದರೆ ಹ್ಯಾಂಗಾ..?ತ್ಯಾಂಪ
ಅಲ್ದಾನಾ, ಹೋರ್ ಎಲ್ಲರೂ ಹೋತಿಲ್ಯನಾ ಮ್ಯಾಲೆ, ನಿಂದೆಂತ …ದೊಡ್ ವಿಶ್ಯ..
ಏಯ್, ನೀನ್ …… ನೀನ್ ಎಲ್ಲಾ ಕಂಡಾಯ್ತಾ, ನಿಂಗೇನ್ ಹೇಳೂಕೆ, ನಾನ್ ಕಾಣ್ ಫಾರಿನ್ನೀಗ್ ಹೋಯ್ನಾ..?? ಇಲ್ಲೆ. ಕಾಶಿ ತಿರ್ಪತಿಗೂ ಹೋಯಿಲ್ಲೆ, ಮಮ್ಮಕ್ಳನ್ನೂ ಕಾಣಲ್ಲೆ, ಈಗ್ಲೇ ಹೋಗ್ ಅಂದ್ರೆ….. ಯಾವ್ ಲೆಕ್ಕ ಮರಾಯಾ…
ಹಂಗಾರ್ ಒಂದ್ ಕೆಲ್ಸ ಮಾಡಾ, ಈಗ್ಲೇ ಟಿಕ್ಕೇಟ್ ಬುಕ್ ಮಾಡಿ ಕೊಡ್ತೆ, ಎಲ್ಲಾ ಕಡಿ ತಿರ್ಗಾಡ್ಕಂಡ್ ಬಾ…
ಈಗ ಹೇಳ್ರ್ ಹ್ಯಾಂಗಾ..?. ಕಡೀಕ್ ಎಲ್ಲಾರೂ, ಪ್ರಳಯ ಬಂದ್ ಬಿಟ್ರೆ…ಎತ್ತಿಗ್ ಇಲ್ದಿದ್ ಹಾಂಗ್ ಆತ್ತಲೆ ಮರಾಯಾ..
ಅಲ್ಲ ಹಾಂಗೂ ಅಲ್ಲ, ಹೀಂಗೂ ಅಲ್ಲ ಅಂದ್ರೆ…
ಅದೆಂತದೂ ಇಲ್ಯಾ, ಹೆದ್ರಂಬ್ದ್ ಬ್ಯಾಡ ನೀನ್, ಅದೆಲ್ಲ ಇವ್ರ್ ದುಡ್ ಮಾಡೂಕ್ ಕಾಂಬ್ದ್, ಆ ಪ್ರಳಯ ಅಂಧೇಳಿ..ಅಷ್ಟೇ….
ಅಷ್ಟೇ ಅಂತ್ಯಾ…
ಹೌದಾ..
ಹಾಂಗಾರ್ ನಾನ್ ಹೋತೆ, ಅಲ್ಲ ಅರ್ಜೆಂಟಿಗ್ ನಾನ್ ಫೋನ್ ಮಾಡ್ರ್ ಬರ್ಕ್ ಅಕ್ಕಾ…, ಅಲ್ಲ ಒಂದ್ವೇಳೇ ಪ್ರಳಯ ಬಂತ್ ಅಂತೆಳಿ ಆರೆ ನಿನ್ನ್ ಕರಿತೆ, ನೀನ್ ಬತ್ತೆ ಅಲ್ದಾ,
ಶೀನ ನಗ್ಯಾಡ್ ಕಂಡ್ ಹೇಳ್ದ” ಅಲ್ದಾನಾ ಪ್ರಳಯ ಬಂದ್ರೆ ನಾನೂ ಎಲ್ಲಿರ್ತೆ ಮಾರಾಯಾ, ನಾನೂ ಮುಳ್ಗುದಿಲ್ಯಾ..
ನಿಂಗ್ ಮೀಸೂಕ್ ಬತ್ತಲೆ ಮಾರಾಯಾ, ನನ್ಕಂಡಂಗಾ ನೀನ್, ನನ್ನ್ ತಪ್ಸೂಕ್ ಬತ್ಯ ಅಲ್ದಾ..
ಆಯ್ತಾ…
ಗ್ಯಾರಂಟೀ ಬತ್ತಿಲ್ಲೆ ಅಂತ್ಯಾ..??
ಇಲ್ಯಾ…
ಹಂಗಾರ್ ನಾನ್ ಹೋತೆ
ಎಲ್ಲಿಗೆ
ಅದೆಂತದೋ .. ಕೊಂಕಣಿ ಪೈ”ದ ಜೀವ್ನ ಅಂತೆಳಿ ಸಿನೇಮಾ ಬಂದೀತ್ ಅಂಬ್ರಲ್ಲೆ, ಅದಕ್ ಹೋಯ್ಕ್
ಎಂತಕೋ
ಅಲ್ಲ, ಅದ್ರಂಗ್ ಒಂದ್ ಗಂಡ್, ಸುಮಾರ್ ದಿವ್ಸ ನೀರಂಗೇ ಇದ್ರು ಏನಾಯ್ಲೆ ಅಂಬ್ರ, ಬದ್ಕೀ ಬಂದ ಅಂಬ್ರಲ್ಲೆ, ನಂಗೂ ಏನಾರೂ ಕಲುಕಿತ್ತಾ ಅದ್ರಗೆ ಅಂದೇಳಿ ಕಾಂತೆ…ಯಂತಕೂ ಇರ್ಲಿ.. ಅಲ್ದಾ!!

ತ್ಯಾಂಪ …ತ್ಯಾಂಪನೇ.. ಬಿಡಿ

 

 

ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪು

ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪು
ಮೈ ಮನವು ಭೋರ್ಗೆರೆವ ಕನಸ ಕಡಲು

ಚಿತ್ತ ಭಿತ್ತಿಯಲೆಲ್ಲ ನೀನೆ ಮುತ್ತಿದೆ ಮತ್ತೆ
ಇಹದ ಪರಿಯನೆ ನಾನು ಮರೆತು ನಿಂತೆ

ಏನು ಮಾಡಿದೆ ಮೋಡಿ ನನ್ನೇ ಕಾಡುವ ಗೆಳತಿ
ಏಕಾಂತದಲ್ಲೆಲ್ಲಿ ಮಧುರ ಹೊನಲೇ

ಬೆನ್ನತ್ತಿ ಬಾರದಿರು ಹೀಗಂತೂ ಕಾಡದಿರು
ಪ್ರೀತಿ ಕಲಿಸಿದ ನಲ್ಲೇ ನನ್ನ ಒಲವೇ

ಮೀಟಿ ತನುವನ್ನೆಲ್ಲ ಹಳೆಯ ಕಾಡುವ ಮೋಹ
ಆವರಿಸಿ ಮನವೆಲ್ಲ ಮಧುರ ನೋವ

ಪ್ರೇಮ ಸಂಪದದಲ್ಲೇ ಬದುಕು ಸಾರ್ಥಕವೆಲ್ಲ
ಇಹುದು ಬಾಳಿನ ಅರ್ಥ ಸತ್ವವೆಲ್ಲ