ಪ್ರತಿ ದಿನವೂ ಹೊಸ ದಿನ, ಹೊಸಹುಟ್ಟು ಎಂದಿನಂತೆ!

ಪ್ರತಿ ದಿನವೂ ಹೊಸ ದಿನ ಹೊಸಹುಟ್ಟು

ಎಂದಿನಂತೆ

ಪ್ರಸ್ತುತ

ಮತ್ತೊಮ್ಮೆ ಬೆಳಗಾಗುತ್ತದೆ.
ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಜಗತ್ತೇ ತನ್ನ ರೀತಿಯಲ್ಲಿ.

ಆದರೆ ಕೆಲವು ಸಂಸಾರಗಳ ಜೀವನ ರೀತಿಯೇ ಬದಲಾಗಿರುತ್ತದೆ.

ಪಾಪ ಇವರೆಲ್ಲಾ ತಮ್ಮ  ತಮ್ಮ ಸಂಸಾರಗಳ ಬಗ್ಗೆ, ತಮ್ಮ ಗಳ ಬಗ್ಗೆ ಎಷ್ಟೊಂದು ಯೋಚಿಸಿದ್ದರೋ ಏನೋ, ಆದರೆ ಒಂದು ಕ್ಷಣ ಆ ಒಂದು ಕ್ಷಣದಲ್ಲಿ ಎಲ್ಲವೂ ಶೂನ್ಯವಾಗಿರುತ್ತೆ.

ಎಲ್ಲಿಂದ ಎಲ್ಲಿಗೆ?

ಎಷ್ಟೊಂದು ವೈರುಧ್ಯ? ಎಲ್ಲರ ಜೀವನ…?

ಇವತ್ತು ಮುಂಬಯಿಯ ವಿದ್ಯ್ಮಾನಗಳಲ್ಲಿ ತಲೆಬಿಸಿ ಮಾಡಿಕೊಂಡಸ್ಟನ್ನೂ ಕೇವಲ ದಿನಗಳಲ್ಲಿಯೇ ಮರೆತು ಬಿಡುತ್ತೇವೆ.

ನಮ್ಮ ಜೀವನ ನಮ್ಮದು.
ಇವತ್ತು ಸಂಜೆ ಉದಯ ಟೀವಿಯ ವಾರ್ತೆಯಲ್ಲಿ ಕಂಡ ವಿಷಯವೂ ಅಷ್ಟೇ. ತಾನು ಹುಟ್ಟಿ ಇನ್ನೂ ಕಣ್ತೆರೆದ ಈ ಪ್ರಪಂಚವನ್ನೂ ಸರಿಯಾಅಗಿ ಕಂಡರಿಯದ ಎಳೆ ಕಂದಮ್ಮನನ್ನು ಅದು ಹೇಗೆ ಕತ್ತು ಕೊಯ್ದು ಸಾಯಿಸಲು ಮನಸ್ಸು ಬಂತೋ ….? ಆದರೆ ತನಗೆ ತಿಂಡಿಮಾಡಿ ತಿನ್ನಿಸಿದ ಕುಡಿಯಲು ಜೀವ ಜಲ ಕೊಟ್ಟವರನ್ನೂ ಗುಂಡುಹೊಡೆದು ಸಾಯಿಸುವ ಕೊಲೆಪಾತಕಿಗೂ ಇವರಿಗೂ ಎಲ್ಲಿದೆ ವ್ಯತ್ಯಾಸ?

ಇದೆಂತಹ ಜೀವನ? ಇದೆಂತಹ ರೀತಿ ನೀತಿ..?

ಕನಸಿನ ನಿಜ

ವಿಶಾಲ ರಾಜಮಾರ್ಗದ ಮೇಲೆ
ಓಡಾಡುತಿಹ ಜನರು
ಸರತಿಯಂತೆ
ಒಬ್ಬರ ಹಿಂದೆ ಒಬ್ಬರು
ವೇಗವಾಗಿ ಅರಾಮವಾಗಿ
ಎಲ್ಲೆಲ್ಲೂ ಅವರೇ
ಅಂಗಡಿ ಮುಂಗಟ್ಟುಗಳೆಲ್ಲ ಅಲ್ಲಿಯೇ
ಮನೆ ಕೊಳ್ಳ ಬಂಗಲೆ ಎಲ್ಲವೂ
ನಾಳಿನ ಚಿಂತೆಯೂ ಇಲ್ಲದೇ
ಆರಾಮವಾಗಿದ್ದಾರೆ ಇವರು

ಪಕ್ಕದ ಜೀಬ್ರಾ ಕ್ರಾಸಿಂಗ್ ನಲ್ಲಿ
ಮಾತ್ರ ಯಂತ್ರಗಳು
ಹಿಂದೆ ಮುಂದೆ
ಆಚೆ ಈಚೆ ಎಲ್ಲ
ಅಕ್ಕ ಪಕ್ಕದ ಕಾಲುದಾರಿಯಲ್ಲಂತೂ
ಎದ್ದು ಬಿದ್ದು ಚಲಿಸುತ್ತಿದ್ದರೆ
ಅಲ್ಲಲ್ಲೆ ಬಿದ್ದು ನರಳುತ್ತಲೂ
ಇದ್ದಾರೆ ಹಲಕೆಲವರು
ಹಾಡಿ ನ್ಯಾಯದ ಬಂಟರು
ಯಾರೊಬ್ಬರೂ ಪಕ್ಕದ ರಾಜ ಮಾರ್ಗಕ್ಕೆ
ಹೋಗಲಿಚ್ಚಿಸುವುದೇ ಇಲ್ಲ
ವಿಚಿತ್ರದ ಸಂಗತಿ ಎಂದರೆ

ಆಚೆಯವರೆಲ್ಲ ಮೊದಲು
ಇಲ್ಲಿಯೂ ಇದ್ದರು
ಈಗ ನೆನಪಿಲ್ಲ ಅಷ್ಟೇ

ಬಂದಳಿಕೆ

ಮೊದಲೊಮ್ಮೆ
ಅಪರೂಪದ
ಗಿಡವೊಂದು
ಕಣ್ಣಿಗೆ ಬಿತ್ತು
ಹಾಗೆಯೇ ಬಿಡಲು
ಮನಸ್ಸಾಗದೇ
ಎತ್ತಿ ತಂದು
ಜೋಪಾನವಾಗಿ
ಮನೆಯೊಳಗೆ
ಇಟ್ಟು ಪೋಷಿಸಿದೆ
ಈಗ ಅದೇ
ನನ್ನೆಲ್ಲವನ್ನೂ
ಅಪೋಷಣೆಯಾಗಿಸಿದೆ
ಸ್ವಂತಿಗೆಗೆ
ಆಸ್ಪದವೇ
ಇಲ್ಲದಂತೆ ಆವರಿಸಿ
ಬೆಳೆದು ಬಿಟ್ಟಿದೆ
ಸಾರ್ವತ್ರಿಕವಾಗಿಬಿಟ್ಟಿದೆ!!
ಈಗ ನಾನೇ
ಅನ್ವೇಷಣೆಯಲ್ಲಿದ್ದೇನೆ
ನೆಮ್ಮದಿಯಿಂದಿರಲು ನೆಲ
ಮೇಲೊಂದು ಸೂರು

ಹೈಕುಗಳು

1
ದೊಡ್ಡೋನಾಗಿ
ಆಟೋಗೆ ವಯಸ್ಸಾದರೆ
ಏನಾಗತ್ತೆ
ಲಾರಿಯಾಗತ್ತೆ

2
ಮೀನು -ಗಾಳ
ಮೀನು ನೀರು ಗಾಳ ಕೊಂಡಿ
ಸೇರಿಸಿದರೆ
ಮದುವೆ

3
ಹೋಳಿ
ಈ ಮುಸ್ಸಂಜೆಯ
ನೆತ್ತರೋಕುಳಿ
ಬಾನ ಭಾಸ್ಕರಗೆ

4
ರಾಜ -ಕಾರಣ
ಈಗೆಲ್ಲೆಲ್ಲೂ ರಾಜಕಾರಣ
ಇವರದೇ
ಕಾರು-ಬಾರು

5
ಬಾರ್
ಈಗಂತೂ ನಿದ್ದೆಯೂ
ಇವರಿಗೆ ಅಮಲು
ಬಾರ-ದು

6
ಕಾವ್ಯ
ಅರ್ಥವಾದರೆ ಸುಂದರ
ಕಾವ್ಯ ಈ
ದಾಂಪತ್ಯ

7
ಅಶಾವಾದ
ದಿನಾ ಅದೇ ಬಾನು ಸೂರ್ಯ
ಆದರೂ ಈ ನಿರೀಕ್ಷೆ
ಯಾಕೋ

8
ಧ್ಯಾನಿ
ಇರಬೇಕು ಒಂತರಾ
ಗುಂಪಲ್ಲಿ
ಒಂಟಿಯಾಗಿ

9
ಸಾಲದ ರೈತ
ಓದದ ನಮ್ಮ ರೈತ
ಸಾಲ ತೆಗೆದು
ನೆಗೆದು ಬಿದ್ದ

10

ಓದಿದ ಕೂಚು ಭಟ್ಟ
ಸೈಟ್ ತೆಗೆದು
ಮೇಲೆ ಬಂದ

ಸಂರಕ್ಷಿತ: ಮರೆಯದಿರಿ ಕನ್ನಡ ನೀವು ಬೆಳಕಿನಲ್ಲಿದ್ದಾಗ ಎಲ್ಲವೂ ನಿಮ್ಮ ಹಿಂಬಾಲಿಸುವುದು.ಆದರೆ ಕತ್ತಲೆಯಲ್ಲಿದ್ದಾಗ ನೆರಳೂ ಹಿಂಬಾಲಿಸದು.ಈ ಸತ್ಯ ಗೊತ್ತಿದ್ದರೆ ಕತ್ತಲೆಯಲ್ಲಿದ್ದಾಗ ಬೇಸರವಾಗುವುದಿಲ್ಲ.

ಪಠ್ಯವನ್ನು ಗುಪ್ತಪದದಿಂದ ಸಂರಕ್ಷಿಸಲಾಗಿದೆ. ಇದನ್ನು ನೋಡಲು ನಿಮ್ಮ ಗುಪ್ತಪದವನ್ನು ಕೆಳಗೆ ನಮೂದಿಸಿ:

ಟಿಪ್ಪಣಿಗಳನ್ನು ನೋಡಲು ನಿಮ್ಮ ಪ್ರವೇಶಪದವನ್ನು ನಮೂದಿಸಿ. Posted in ಯೋಧಮನ Tagged