ಸಂರಕ್ಷಿತ: ಬಂದಳಿಕೆ

ಪಠ್ಯವನ್ನು ಗುಪ್ತಪದದಿಂದ ಸಂರಕ್ಷಿಸಲಾಗಿದೆ. ಇದನ್ನು ನೋಡಲು ನಿಮ್ಮ ಗುಪ್ತಪದವನ್ನು ಕೆಳಗೆ ನಮೂದಿಸಿ:

Advertisements

ಅನುಭವ ಕಥನ

ಸಾವಿನ ಹತ್ತಿರ

ನಾನು ಸುಮಾರು ಏಳೆಂಟು ವRಷದವನಾಗಿರುವಾಗ ನಡೆದ ಘಟನೆಯಿದು. ನನಗಾಗ ಈಜುವುದೊಂದು ಮಹಾ ವಿದ್ಯೆಯಾಗಿ ಕಾಣಿಸುತ್ತಿತ್ತು.ಮನೆಯಲ್ಲಿ ಅದನ್ನ ಹೇಳಿಕೊಡುವುದು ದೂರವಿರಲಿ, ನೀರಿನ ಸಾಮಾನ್ಯ ಶ್ರೋತವಾದ ಕೆರೆ ಹೊಳೆ ಮತ್ತು ಬಾವಿಗಳು ಸಹಾ ಮಕ್ಕಳ ಮಟ್ಟಿಗೆ ಒಉಟ್ ಆೞ್ ಬೊಉಂಡ್ ಆಗಿರುತ್ತಿದ್ದ ಕಾಲವದು.ಆದರೂ ಮಕ್ಕಳು ನಾವೆಲ್ಲಾ ಅದನ್ನು ಕಲಿಯಲು ಮನೆಯವರಿಗೆ ಗೊತ್ತಿಲ್ಲದ ಹಾಗೆ ಕಲಿಯಲು ಶತ ಪ್ರಯತ್ನ ಮಾಡುತ್ತಿದ್ದೆವು. ಆದರೆ ನಮ್ಮ ಕೆಲಸದವರೆಲ್ಲಾ ಅದರ ಬಗ್ಗೆ ಹೇಳುತ್ತಿರುವಾಗ,ದನ ಕರುಗಳು ನಿರಾಯಾಸವಾಗಿ ನೀರಲ್ಲಿ ಈಜುವುದು ನೋಡುವಾಗ, ಅದೇನೂ ಮಹಾ ವಿದ್ಯೆಯಲ್ಲ, ಯಾರೂ ನಿರಾಯಾಸವಾಗಿ ಕಲಿಯಬಹುದು ಅನ್ನಿಸುತ್ತಿತ್ತು. ಕೆಲಸದವರಲ್ಲಿ ನನ್ನ ವಯಸ್ಸಿನ ಶೀನನ ಹತ್ತಿರ ನಾನು ಯಾವಾಗಲೂ ಈಜು ಕಲಿಸಿಕೊಡಲು ಗೋಗೆರೆಯುತ್ತಿದ್ದೆ.ನನ್ನ ಬಹು ಸಮಯದ ಒತ್ತಾಯದ ಬಳಿಕ ಒಂದು ರವಿವಾರ ಆತ ನನಗೆ ಕಲಿಸಿಕೊಡಲು ಒಪ್ಪಿದ.ರವಿವಾರವೇ ಯಾಕೆ ಆರಿಸಿದ್ದೆಂದರೆ, ಆ ದಿನ ನಾವು ಮಕ್ಕಳೆಲ್ಲಾ ೞ್ರೀಯಾಗಿರುತ್ತಿದ್ದೆವು, ಮತ್ತು ಪ್ರತೀ ರವಿವಾರ ಕೆಲಸದವರು ನಮ್ಮ ದನಕರುಗಳನ್ನೆಲ್ಲಾ ಕರೆದುಕೊಂಡು ಹೋಗಿ ಸುಮಾರು ಎರಡೂವರೆ ಮೈಲು ದೂರವಿರುವ ನದಿಯಲ್ಲಿ ಮೀಯಿಸಿಕೊಂಡು ಬರುವುದು ಆಗಿನ ಪರಿಪಾಠವಾಗಿತ್ತು. ಅಂತೆಯೇ ಒಂದು ರವಿವಾರ ಮನೆಯಲ್ಲಿ ಯಾರಿಗೂ ಹೇಳದೇ ಶೀನನ ಮತ್ತು ಅವನ ಅಣ್ಣನ ಜತೆ ದನಕರುಗಳನ್ನು ಹೊಡೆದುಕೊಂಡು ಹೊರಟೆವು.ಬೇಸಗೆಯ ಆರಂಭದ ದಿನಗಳವು,ನದಿಯಲ್ಲಿ ನೀರಿನ ಹರವು ಸ್ವಲ್ಪ ಕಡಿಮೆಯೇ ಇತ್ತು, ಆದರೂ ಕೆಲವೆಡೆ ಹೊಡಗುಂಡಿಗಳಿದ್ದು, ಒಟ್ಟಾರೆ ಈಜಲು ಒಂದು ಒಳ್ಳೆಯ ಜಾಗವಾಗಿತ್ತು.ಅಣ್ಣ ಪಿಣಿಯನನ್ನು ದನಕರುಗಳ ಜತೆ ಬಿಟ್ಟು ನಾವಿಬ್ಬರೂ ಬೇರೇಯೇ ಹೊರಟೆವು. ಶೀನ ಆರಿಸಿದ್ದ ಜಾಗದಲ್ಲಿ ನೀರು ಸಾಕಷ್ಟು ಆಳವಾಗಿಯೇ ಇತ್ತು.ಆತ ತಾನು ಮೊದಲು ನೀರಲ್ಲಿ ಧುಮುಕಿ ನಾನಾ ರೀತಿಯಲ್ಲಿ ಈಜಿ ತೋರಿಸಿದ, ಆತನ ಈ ಈಜಾಟ ನನ್ನನ್ನು ಎಷ್ಟು ಪ್ರಚೋದಿಸಿತ್ತೆಂದರೆ, ನಾನು ನೀರಲ್ಲಿಳಿದು ಒಮ್ಮೆ ಕೈ ಕಾಲು ಆಡಿಸಿದರೆ ಸಾಕು ಲೀಲಾಜಾಲವಾಗಿ ಈಜಬಹುದು ಅನ್ನಿಸಿತು.ನನಗೆ ಈಜು ಕಲಿಸಲು ಆತ ತನ್ನದೇ ವಿಧಾನ ಆರಿಸಿಕೊಂಡಿದ್ದ.ನನ್ನನ್ನು ತನ್ನ ಬೆನ್ನ ಮೇಲಿರಿಸಿಕೊಂಡು ಈಜುತ್ತಾ ಹೋಗಿ ಆಳದ ಮಡುವಿನ ನಟ್ಟ ನಡುವೆ ದುಡುಮ್ಮನೆ ಮುಳುಗಿ ನೀರ ಅಡಿಯಿಂದಲೇ ಬೇರೆ ಕಡೆ ಹೋದ.ಆಗಿನ ಸ್ಥಿತಿ ಯೋಚಿಸಿದರೆ ಈಗಲೂ ಮೈ ಜುಮ್ಮೆನ್ನಿಸುತ್ತದೆ,ಒಂದು ಕ್ಷಣ ಅಷ್ಟೆ, ನೀರಲ್ಲಿ ಬೀಳುವುದೇ ಈಜು ಅಂತ ತಿಳಿದ ನನ್ನ ಆಗಿನ ಪರಿಸ್ಥಿತಿ ಯಾರಿಗೂ ಬೇಡ , ಮೂಗು ಬಾಯಲ್ಲಿ ನೀರು ತುಂಬಿ ಶ್ವಾಸ ಆಡಲೂ ಆಗದೇ ಮುಳುಗುತ್ತ ಏಳುತ್ತಾ, ಒಳಕ್ಕೆಳೆದ ಶ್ವಾಸದೊಂದಿಗೆ ನೀರನ್ನೂ ಕುಡಿಯುತ್ತ…ಯಾಕಾದರೂ ನಾನು ಈ ಶೀನನ ಹತ್ತಿರ ಈಜು ಕಲಿಸಲು ಕೇಳಿಕೊಂಡೆನೋ,ಇದು ಮಾತ್ರ ಬೇಡವಿತ್ತು, ನನ್ನ ಗತಿ ಇನ್ನೇನು ಮುಗಿಯಿತು ಅಂದುಕೊಳ್ಳುವ ಅದೊಂದು ವಿಚಿತ್ರ ಪರಿಸ್ಥಿತಿಯಾಗಿತ್ತು ಸಾವು ಹತ್ತಿರ ಬಂದಾಗ ರಾಮ ರಾಮ ಅನ್ನಬೇಕೆಂದು ಯಾರೋ ಹೇಳಿದ್ದು ನೆನಪಿಗೆ ಬಂದು, ಅಂತಹಾ ಪರಿಸ್ಥಿತಿಯಲ್ಲೂ ಅನ್ನತೊಡಗಿದೆ. ಆ ದಿನ ಸರಿಯಾದ ಸಮಯದಲ್ಲಿ ಪಿಣಿಯ ಬಂದು ನನ್ನ ಉಳಿಸದೇ ಇದ್ದಿದ್ದರೆ… ನಿಮ್ಮೆದುರು ಈ ವಿಷಯವನ್ನು ಯಾರೋ ಬೇರೆಯೇ ರೀತಿಯಲ್ಲಿ ಹೇಳುತ್ತಿದ್ದರು

ಸಾವಿನ ಬಾಗಿಲು

ಈ ಘಟನೆ ನಡೆದಾಗ ನನಗೆ ಸುಮಾರು ಇಪ್ಪತ್ತು ವರುಷ. ಆಗೊಮ್ಮೆ ನನಗೆ ಅನಾರೋಗ್ಯ ಉಂಟಾಯಿತು. ತಿಂದ ಯಾವ ಅಹಾರವೂ ಜೀರ್ಣವಾಗದೇ, ವಾಂತಿಯಾಗಿ, ದೇಹವು ದುರ್ಬಲವಾಗಿ ಐವತ್ತು ಕೇಜಿಯ ದೇಹ ಮೂವತ್ತಾಯಿತು.ತಂದೆಯವರು ಊರಿನ ಡಾಕ್ಟರರ ಸಲಹೆಯಂತೆ ಕುಂದಾಪುರದ ಸರ್ಕಾರೀ ಆಸ್ಪತ್ರೆಗೆ ಸೇರಿಸಲಾಯ್ತು. ಕಲುಷಿತ ನೀರಿನ ಸೇವನೆಯಿಂದಾಗಿ ಟೈೞಾಯಿಡ್, ಲಿವರ್ ಎಲ್ಲಾ ಖಾಯಿಲೆಗಳೂ ಒಟ್ಟಿಗೇ ಬಂದುವಂತ ಅಲ್ಲಿನ ಡಾಕ್ಟರುಗಳು ಹೇಳಿದರಂತೆ. ಏಳಲೂ ಆಗದಷ್ಟು ನಿತ್ರಾಣವಾಗಿತ್ತು.ಹದಿನೈದು ದಿನ ಆಸ್ಪತ್ರೆಯ ಬೆಡ್ ನಲ್ಲಿಯೇ ಎಲ್ಲ.ಮನೆಯಿಂದ ಸುಮಾರು 28 ಕಿಲೋ ಮೀಟರ್ ದೂರದಲ್ಲಿದ್ದುದರಿಂದ ದಿನಾ ಸರದಿಯಂತೆ ಅಮ್ಮ ಅಣ್ಣ ಅಪ್ಪ ಎಲ್ಲರೂ ಬಂದು ರಾತ್ರೆ ನನ್ನೊಡನಿದ್ದು ದಿನದಲ್ಲಿ ಬದಲಾಗುತ್ತಿದ್ದರು. ಆ ದಿನ ನನಗೆ ಈಗಲೂ ನೆನಪಿದೆ. ಅಪ್ಪ ಹಿಂದಿನ ರಾತ್ರೆಯಿದ್ದುದರಿಂದ  ಅಮ್ಮ ಬಂದ ಕೂಡಲೇ ಹೊರಟು ನಿಂತರು. ಆಗಲೇ ನನ್ನ ಚಿಕ್ಕಪ್ಪ ಕೂಡಾ ಬಂದುದರಿಂದ ಅಲ್ಲಿಯೇ ಮಾತನಾಡುತ್ತಾ ನಿಂತರು.ಆಸ್ಪತ್ರೆಯ ಉಪಚಾರದಿಂದಾಗಿ ನಾನು ಚೇತರಿಸಿಕೊಳ್ಳುತ್ತಿದ್ದೆನಷ್ಟೆ.ನಾನು ಶೊಉಚಾಲಯಕ್ಕೆ ಹೋಗಲು ಕೇಳಿಕೊಂಡೆ. ಮನಸ್ಸಿಲ್ಲದ ಮನಸ್ಸಿನಿಂದ ಅಪ್ಪ ಒಪ್ಪಿಕೊಂಡರು. ಅಪ್ಪ ಚಿಕ್ಕಪ್ಪ ಇಬ್ಬರೂ ಕೈಹಿಡಿದು ನನ್ನನ್ನು ನಡೆಸಿಕೊಂಡೇ ಶೊಉಚಾಲಯಕ್ಕೆ ಕರೆತಂದರು. ನನ್ನ ಒತ್ತಾಯಕ್ಕೆ ಕಟ್ಟು ಬಿದ್ದ ಅವರನ್ನು ಬಿಟ್ಟು ನಾನು ಎರಡೆ ಹೆಜ್ಜೆ ನಡೆದೆ ಅಷ್ಟೆ… ಮುಂದೆ ನಾನು ನಾನಾಗಿ ಅಲ್ಲಿರಲೇ ಇಲ್ಲ. ನೀಲ ಆಕಾಶದಲ್ಲಿ ಹತ್ತಿಗಿಂತಲೂ ಹಗುರವಾಗಿ ಹಾರುತ್ತಲ್ಲಿದ್ದೆ.ನೋವು ನಲಿವಿನ, ಸುಖ ದುಖದ ಪರಿವಿರದ, ಸಂಬಂಧದ ಗೋಜಿಲ್ಲದ, ನಿSಚಿತ ಗುರಿಯ ಅತ್ಯುನ್ನತ ಸುಖಕರ ಪ್ರಯಾಣ ಅದಾಗಿತ್ತು. ಅದು ಎಣಿಸಿದರೆ ಈಗಲೂ ಮನಸ್ಸು ಹಗುರವಾಗುತ್ತದೆ.ಎಷ್ಟು ಸಮಯ ಪ್ರಯಾಣಿಸಿದೆ ಗೊತ್ತಿಲ್ಲ ಅಷ್ಟರಲ್ಲಿ ಯಾರೋ ನನ್ನ ಹೆಸರು ಹಿದಿದು ಕರೆದರು. ನಾನು ಬೆಡ್ ಮೇಲೆ ಮಲಗಿದ್ದುದು ಅರಿವಾಯಿತು ಅಪ್ಪ ಅಮ್ಮ ಚಿಕ್ಕಪ್ಪ ಎಲ್ಲರ ಕಣ್ಣುಗಳಲ್ಲಿಯೂ ಗಂಗಾ ಭಾಗೀರಥಿ. ನಾನು ಇನ್ನಿಲ್ಲವೆಂದೇ ಎಣಿಸಿದ್ದ ಎಲ್ಲರೂ ಭಾವಾತಿರೇಕದಿಂದ ಸಂಭ್ರಮಪಟ್ಟರು.ಅಲ್ಲಿನ ಅದೇ ದಿನದ ಇನ್ನೊಂದು ಘಟನೆಯನ್ನೂ ನಿಮಗೆ ಹೇಳಲೇ ಬೇಕು. ಸರಕಾರೀ ಅಸ್ಪತ್ರೆಯ ದಿನಚರಿಯೋ ದೇವರಿಗೇ ಪ್ರೀತಿ ಆದರೆ ಆಗಿನ ವೈದ್ಯರು ಸಾಕ್ಷಾತ್ ದೇವರೇ ಅಂದುಕೊಳ್ಳುತ್ತಿದ್ದ ಕಾಲವದು.ಮರದಿಂದ ಬಿದ್ದು ಮೂಳೆ ಮುರಿದುಕೊಂದವ ಒಬ್ಬ,ಅವನ ನರಳುವಿಕೆ, ಗೂರಲಿನ ಮುದುಕರೊಬ್ಬರ ಯಾತನೆ,ರಾತ್ರೆಯಾದರಂತೂ ಈಎಲ್ಲ ನರಳುವಿಕೆಯ ಶಬ್ದ ಉಲ್ಭಣಗೊಂದು ಒಂದು ಭಯಾನಕ ಲೋಕವೇ ಸ್ರಷ್ಟಿಯಾಗುತ್ತಿತ್ತು.ನನ್ನ ಪಕ್ಕದ ಬೆಡ್ ನಲ್ಲೊಬ್ಬ ಹುಡುಗನಿದ್ದ. ಅವನನ್ನು ನೋಡಿಕೊಳ್ಳಲು ಅವನ ತಾಯಿ ಬರುತ್ತಿದ್ದಳು ಪ್ರಾಯSಅಃ ಕಷ್ಟ ಜೀವಿಯಾದ ಅಕೆಗೆ ರಾತ್ರೆಯಾಯಿತೆಂದರೆ ಎಲ್ಲಿಲ್ಲದ ನಿದ್ದೆ ಬಂದುಬಿಡುತ್ತಿತ್ತು. ಆ ದಿನ ರಾತ್ರೆ ಆತ ನೀರಿಗಾಗಿ ಅಮ್ಮನ್ನ ಕರೆದ, ಅವಳಿಗೆ ಎಚ್ಚರವಾಗುವ ಮೊದಲೇ ನಾನು ನೋಡನೋಡುತ್ತಿರುವಂತೆಯೇ ಆತ ಈಲೋಕ ತ್ಯಜಿಸಿದ್ದ. ಆತನ ಕಳೆದೇ ಇದ್ದ ಬಾಯಿ ಅಲುಗಾಡದೇ ಇದ್ದ ದೇಹನೋಡಿ ಹೆದರಿ ಗಟ್ಟಿಯಾಗಿ ಚೀರಿದೆ.ಎಲ್ಲರೂ ಬಂದರೂ ಆತನನ್ನು ಉಳಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯ ಡಾಕ್ಟರ್, ಗೋಳಿಡುತ್ತಿದ್ದ ಆತನ ತಾಯಿ..ಎಣಿಸಿದರೆ ಈಗಲೂ ನನ್ನ ಮನಸ್ಸು ಅಂದಿನ ಆ ಸ್ಥಿತಿಗೆ ತಲುಪಿಬಿಡುತ್ತದೆ, ಮತ್ತು ಜೀವನ ಇಷ್ಟೆಯಾ ಅನ್ನಿಸಿಬಿಡುತ್ತದೆ.