ನಕ್ಕರದೇ ಸ್ವರ್ಗ

ನಕ್ಕರದೇ ಸ್ವರ್ಗ

ಸಿಪ್ಪೆ ಸಮೇತ ತಿನ್ನುವುದು

” ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು”

” ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?”
” ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿತವಾಗಿರುತ್ತವೆ.”

ನನ್ನದಲ್ಲ ನಮ್ಮದು

“ನನ್ನ ಮಕ್ಕಳು, ನನ್ನ ಮನೆ, ನನ್ನ ಗಾಡಿ ಅಂತ ಹೇಳ್ತಾ ಇರ್ತೀಯಲ್ಲ ಎಲ್ಲವೂ ನಿನ್ನದೇನಾ? ನಾನೂ ನಿನ್ನೊಟ್ಟಿಗೇ ಇದ್ದೇನೆಂದು ನಿಮಗೆ ಅನ್ನಿಸೋಲ್ವಾ?” ಸಿಟ್ಟಾಗಿ ಕೇಳಿದಳು ತ್ಯಾಂಪಿ ಗಂಡನನ್ನೊಮ್ಮೆ.

” ಹಾಗಾದರೆ ನಾನು ಏನು ಮಾಡಬೇಕು ಅಂತ ನಿನ್ನ ಮಾತಿನ ಅರ್ಥ?” ಕೇಳಿದ ತ್ಯಾಂಪ.
“ಯಾವಾಗಲೂ ನನ್ನ ಅನ್ನುವ ಬದಲಿಗೆ ನಮ್ಮ ಅಂತ ಹೇಳಿ ನೋಡಿ ಎಷ್ಟು ಚೆನ್ನಾಗಿರುತ್ತೆ ಅಂತ”.
“ಸ್ಸರಿ ಇನ್ನು ಮುಂದೆ ಹಾಗೆಯೇ ಹೇಳುತ್ತೇನೆ” ಎಂದ ತ್ಯಾಂಪ.

ಮಾರನೆಯ ದಿನ ತ್ಯಾಂಪ ಏನೋ ಹುಡುಕುತ್ತಿರುವುದನ್ನು ಕಂಡು “ರ್ರೀ ಅಷ್ಟೊತ್ತಿಂದ ಏನು ಹುಡುಕುತ್ತಾ ಇದ್ದೀರಿ” ಕೇಳಿದಳು ತ್ಯಾಂಪಿ.
” ಲೇಯ್ ನನ್ನ ಅಲ್ಲಲ್ಲ ನಮ್ಮಒಳಚಡ್ಡಿ ಸಿಕ್ತಾ ಇಲ್ಲ, ನೋಡಿದೆಯಾ?” ಕೇಳಿದ ತ್ಯಾಂಪ.<–break->

ಚಿಲ್ಲರೆ ಇರಲಿಲ್ಲ

ವೃಧ್ದರು : ನೀನು ತುಂಬಾ ಒಳ್ಳೆಯ ಜಾಣ ಹುಡುಗನಪ್ಪಾ. ಆದರೆ ನಾನು ಕಳೆದು ಕೊಂಡಿರುವುದು ಹತ್ತು ರೂ ನ ಐದು ನೋಟುಗಳಲ್ಲ, ಬದಲಿಗೆ ಐವತ್ತು ರೂ ನ ಒಂದು ನೋಟು ಮರಿ.
ಹುಡುಗ: ಅದು ನನಗೆ ಗೊತ್ತಿದೆ ಸಾರ್, ಆದರೆ ಕಳೆದ ಸಾರಿ ನಾನು ಹೀಗೇ ಒಬ್ಬರಿಗೆ ಅವರ ನೋಟನ್ನು ಹುಡುಕಿ ಕೊಟ್ಟಾಗ, ಅವರ ಬಳಿ ಚಿಲ್ಲರೆಯೇ (ನನಗೆ ಕೊಡಲು) ಇರಲಿಲ್ಲ.

ಬಿಸ್ಲರಿ ನೀರು

ಸ್ನೇಹಿತ ಸರ್ದಾಜಿಯ ಮನೆಗೊಮ್ಮೆ ಹೋಗಿದ್ದೆ,
“ನೀವು ಕುಡಿಯುವ ನೀರಿಗಾಗಿ ಏನೆಲ್ಲ ಮುಂಜಾಗೃತಾ ಕೃಮ ತಗೋಳ್ತೀರಿ?” ಕೇಳಿದೆ, ಸುಮ್ಮನೆ.
” ನಾವು ಮೊದಲು ನೀರನ್ನು ಕುದಿಸುತ್ತೇವೆ” ಸರ್ದಾರ್ಜಿಯೆಂದ
” ಅದರಲ್ಲೂ ಕೀಟಾಣುಗಳಿದ್ದರೆ?”ನಾನೆಂದೆ.

” ನಾವು ಅದನ್ನ ಸೋಸುತ್ತೇವಲ್ಲ” ಸರ್ದಾರ್ಜಿಯೆಂದ.
” ಇನ್ನೂ ಉಳಕೊಂಡಿರ್ತವಲ್ಲ” ರೇಗಿಸಿದೆ ನಾನು.
” ಅವು ಅಕ್ವಾಗಾರ್ಡನಲ್ಲೂ ಕ್ಲೀನ್ ಆಗ್ತದಲ್ಲಾ” ತನ್ನ ಪಟ್ಟು ಬಿಡಲಿಲ್ಲ ಸರ್ದಾರ್ಜಿ.
” ಅಂದರೆ ನಿನ್ನ ಮನೆಯ ನೀರು ನಿಸ್ಸಂದೇಹವಾಗಿಯೂ ಶುದ್ಧ ಬಿಡು” ಎಂದೆ ಸಮಾಧಾನದಿಂದ.

” ನಂಗೊತ್ತಿತ್ತು ನಿನ್ನ ಯೋಚನೆ ಇಷ್ಟೇ ಅಂತ, ನಾನೇನ್ ನಿನ್ನಹಾಗೆ ಅಲ್ಲ” ಸರ್ದಾರ್ಜಿ ಮುಂದುವರೆಸಿದ “ನಾವು ಬಿಸ್ಲರಿಯನ್ನೇ ಉಪಯೋಗಿಸುತ್ತೇವೆ ಗೊತ್ತಾ?”

ಭಾರತೀಯರಲ್ಲ

ರಾಮು : ಈ ಪ್ರಪಂಚದ ಜನರೊಳಗೆ ಪ್ರತಿ ಆರರಲ್ಲೊಬ್ಬರು ಭಾರತೀಯರು ಅಂತಾರಲ್ಲಾ, ಅದು ಶುದ್ಧ ಸುಳ್ಳು.

ಮಾಸ್ಟರ್ : ಯಾಕೋ ಹಾಗೇ ಹೇಳ್ತಿ?.
ರಾಮು : ನನ್ನ ಮಾವ ಜಪಾನಿಗೆ ಹೋದಾಗ ಅವರಿಗೆ ಅಲ್ಲಿ ಒಬ್ಬರೇ ಒಬ್ಬ ಭಾರತೀಯನೂ ಸಿಗಲಿಲ್ಲವಂತೆ, ಹಾಗಿರುವಾಗ

ಒಂದೇ ನಂಬರ್ ಯತ್ಯಾಸ!!!
ಪಕ್ಕದಮನೆಯವರ ಮಗಳು ಫಸ್ಟ ರ‍್ಯಾಂಕ್ ಬಂದಳಂತೆ. ತ್ಯಾಂಪಿಯ ಮಗಳೂ ಅವಳದ್ದೇ ಕ್ಲಾಸ್.ಅವರಿಬ್ಬರ ನಡುವೆ ನಡೆಯಿತು ಈ ಸಂಭಾಷಣೆ.

ತ್ಯಾಂಪಿ : ಅಲ್ಲಾ ವಿಮಲಮ್ಮಾ, ನಿಮ್ಮ ಮಗಳಿಗೂ ನನ್ನ ಮಗಳಿಗೂ ಒಂದೇ ನಂಬರ್ ವ್ಯತ್ಯಾಸ.
ವಿಮಲ : ಹೌದಾ? ಹಾಗಾದರೆ ನಿನ್ನ ಮಗಳು ಎರಡನೇ ರ‍್ಯಾಂಕ್ ಇರಬಹುದು ಅಲ್ವಾ ತ್ಯಾಂಪಮ್ಮಾ?
ತ್ಯಾಂಪಿ : ಇಲ್ಲ ವಿಮಲಮ್ಮ!
ವಿಮಲ : ಮತ್ತೆ, ಮೂರನೆಯ ರ‍್ಯಾಂಕ್?
ತ್ಯಾಂಪಿ : ಇಲ್ಲ, ವಿಮಲಮ್ಮ, ಅವಳು ಫೈಲ್?

ವಿಮಲ : ಅದು ಹ್ಯಾಗೆ ಆಗಲು ಸಾಧ್ಯ?
ತ್ಯಾಂಪಿ : ಹಾಂಗೇನಿಲ್ಲ, ನಿಮ್ಮ ಮಗಳ ರೋಲ್ ನಂಬರ್ 486, ನನ್ನ ಮಗಳದ್ದು 485 ಅಷ್ಟೇ.
ವಿಮಲ :………….!!!

ಬೆಳ್ಳಾಲ ಗೋಪಿನಾಥ ರಾವ್

ತ್ಯಾಂಪ ತ್ಯಾಂಪಿಯರ ಸಲ್ಲಾಪ

ಐ ಮಿಸ್ ಯೂ

ಯಾಕೋ ತ್ಯಾಂಪ ತ್ಯಾಂಪಿಯ ಮೇಲೆ ತುಂಬಾನೇ ಕೋಪದಿಂದಿದ್ದ.
ಅವಳ ಚಿತ್ರವನ್ನು ಎದುರಿಗಿಟ್ಟು ಅದಕ್ಕೆ ಚೂರಿ ಎಸೆಯುವ ಪ್ರಾಕ್ಟೀಸ್ ಮಾಡ್ತಾ ಇದ್ದ.
ಪ್ರತಿ ಬಾರಿಯೂ ಮಿಸ್ ಆಗುತ್ತಿತ್ತು ಟಾರ್ಗೆಟ್
ಆಗಲೇ ತ್ಯಾಂಪಿಯ ಕರೆ ಬಂತು.
ರೀ ಏನ್ ಮಾಡ್ತಾ ಇಡ್ದ್ದೀರಾ..?
ತ್ಯಾಂಪ ಸ್ವಲ್ಪವೂ ಯೋಚಿಸದೇ ಉತ್ತರಿಸಿದ:
ನಿನ್ನೇ ಮಿಸ್ ಮಾಡ್ಕೋತಾ ಇದ್ದೆ ಕಣೇ
ನಿನ್ನ ನೋಡಿದರೂ ಸಮಸ್ಯೆಯೇ ಮಾಯ
ತ್ಯಾಂಪಿ: ಡಾಲಿಂ.. ಯಾಕೆ ನೀನು ನನ್ನ ಫೋಟೋ ಹತ್ರಾನೇ ಇಟ್ಕೊಂಡಿರ್ತೀಯಾ, ನಾನೆಂದರೆ ಅಷ್ಟು ಪ್ರೀತಿನಾ ನಿಂಗೆ?
ತ್ಯಾಂಪ : ಹೌದು ಕಣೇ, ಅದ್ಯಾಕೋ ನಿನ್ನ ಚಿತ್ರ ನೋಡಿದರೆ ಸಾಕು, ಎಂತಹ ಸಮಸ್ಯೆಯೂ ಕರಗಿ ನೀರಾಗಿಬಿಡುತ್ತೆ..
ತ್ಯಾಂಪಿ: ನೋಡಿದ್ಯಾ, ನಾನು ನನ್ನ ಚಿತ್ರ ………. ಎಂತಹ ಪವಾಡ ಅಲ್ಲವೇ ನಿನ್ನ ಪಾಲಿಗೆ?
ತ್ಯಾಂಪ: ಎಂತಹಾ ಪವಾಡವೂ ಅಲ್ಲ, ಪ್ರತಿ ಬಾರಿ ಸಮಸ್ಯೆ ಎದುರಾದಾಗಲೆಲ್ಲಾ, ನಿನ್ನ ಫೋಟೋ ನೋಡಿ ಈ ಸಮಸ್ಯೆಗಿಂತ ದೊಡ್ಡದೇನಲ್ಲವಲ್ಲ ಎಂದುಕೊಳ್ಳುತ್ತೇನೆ. ಸಮಸ್ಯೆ ತಕ್ಷಣ ಮಾಯ.

ಇದು ನಿಮಗೆ

ತ್ಯಾಂಪಿ : ನಿಮಗೆ ವೈಫ್ ನ್ ಅರ್ಥ ಗೊತ್ತಾ..?
ತ್ಯಾಂಪ: ಯಾಕೆ ಗೊತ್ತಿಲ್ಲ..?
ತ್ಯಾಂಪಿ: ಹೇಳಿ..!!
ತ್ಯಾಂಪ: ವಿಥೌಟ್ ಇನ್ಪಾರ್ಮೇಶನ್ ಫೈಟಿಂಗ್ ಎವರ್
ತ್ಯಾಂಪಿ: ಅಲ್ಲಲ್ಲ..
ತ್ಯಾಂಪ: ಮತ್ತೆ … ಮತ್ತೆ
ತ್ಯಾಂಪಿ: ನಾನು ಹೇಳಲಾ..?
ತ್ಯಾಂಪ: ಹೇಳು
ತ್ಯಾಂಪಿ: ವಿದ್ ಈಡಿಯಟ್ ಪಾರ್ ಎವರ್

ಬೆಳಿಗ್ಗೆ ಬೆಳಿಗ್ಗೆ ತ್ಯಾಂಪಿ ತ್ಯಾಂಪನ ಬಳಿ ಕಾಫಿ ತಿಂಡಿ ಏನು ಮಾಡಬೇಕೆಂದು ಕೇಳಲು ಬಂದಳು.

ಸಂಜೀವ್ ಕಪೂರ ನ ಖಾನ ಕಜಾನ ನೋಡುತ್ತಿದ್ದ ತ್ಯಾಂಪಿಗೆ ಇದೊಂದು ಅಂಟು ಜಾಡ್ಯ ಎಲ್ಲಿಂದಲೋ ಅಂಟಿ ಕೊಂಡಿತ್ತು.

ಹೀಗೇ ಕೇಳಿದಳು ದೂರದರ್ಶನ ನೋಡುತ್ತಾ..

ಅಲ್ಲರೀ

ತ್ಯಾಂಪ ಖುಷಿಯಾದ..

ಹೇಳು ದಾಲಿಂ

ಅಲ್ಲ ಆ ಬಿಹಾರಿಯವರಿಗೆ ಭಾರತ ರತ್ನ ಸಿಕ್ಕಿತಲ್ಲಾ

ಅಲ್ಲ ಕಣೇ ಹೆಸರಾದರೂ ಸರಿಯಾಗಿ ಹೇಳು ಅವರು ಬಿಹಾರಿ ಅಲ್ಲ. ಅಟಲ್ ಬಿಹಾರಿ

ಎಲ್ಲಾ ಒಂದೇ ಬಿಡಿ, ಅಲ್ಲ ಅವರಿಗೆ ಭಾರತ ರತ್ನ ಸಿಕ್ಕಿತಲ್ಲಾ..

ಹೌದು, ಭಾರತದಲ್ಲಿನ ನಾಗರೀಕರಿಗೆ ಸಿಗೋ ಅತ್ಯುಚ್ಚ ಮೆಡಲ್ ಕಣೇ

ಹೌದು ಅವರಿಗೆ ಯಾಕೆ ಸಿಕ್ಕಿತು ಅಂತ..?

ಅಂದರೆ..?

ಅಲ್ಲ ಅದೇ ಅವರು ಅಂತ ಯಾವ ಕೆಲ್ಸ ಮಾಡಿದರೂ ಅಂತ ..?

ತ್ಯಾಂಪ: ಅವರು ಮದುವೆ ಆಗಲೇ ಇಲ್ಲವಲ್ಲ ಅದಕ್ಕೇ..!!!

…………………

ತದ ನಂತರ ….

ತ್ಯಾಂಪನಿಗೆ ತಿಂಡಿ ಬಿಡಿ…..ಕಾಫೀನೂ ಸಿಗಲಿಲ್ಲವಂತೆ

ಅಂತದ್ದೇನು ಹೇಳಿದೆ ತಾನು ಅಂತ ಅವನಿಗೆ ಅರ್ಥ ಆಗಲೇ ಇಲ್ಲವಂತೆ

ನೀವಾದರೂ ತಿಳಿಸಿ…

Advertisements
This entry was posted in ಅವಿಭಾಗೀಕೃತ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s