ಸಂರಕ್ಷಿತ: ಬಂದಳಿಕೆ

ಪಠ್ಯವನ್ನು ಗುಪ್ತಪದದಿಂದ ಸಂರಕ್ಷಿಸಲಾಗಿದೆ. ಇದನ್ನು ನೋಡಲು ನಿಮ್ಮ ಗುಪ್ತಪದವನ್ನು ಕೆಳಗೆ ನಮೂದಿಸಿ:

ಕನಸಿನ ನಿಜ

ವಿಶಾಲ ರಾಜಮಾರ್ಗದ ಮೇಲೆ
ಓಡಾಡುತಿಹ ಜನರು
ಸರತಿಯಂತೆ
ಒಬ್ಬರ ಹಿಂದೆ ಒಬ್ಬರು
ವೇಗವಾಗಿ ಅರಾಮವಾಗಿ
ಎಲ್ಲೆಲ್ಲೂ ಅವರೇ
ಅಂಗಡಿ ಮುಂಗಟ್ಟುಗಳೆಲ್ಲ ಅಲ್ಲಿಯೇ
ಮನೆ ಕೊಳ್ಳ ಬಂಗಲೆ ಎಲ್ಲವೂ
ನಾಳಿನ ಚಿಂತೆಯೂ ಇಲ್ಲದೇ
ಆರಾಮವಾಗಿದ್ದಾರೆ ಇವರು

ಪಕ್ಕದ ಜೀಬ್ರಾ ಕ್ರಾಸಿಂಗ್ ನಲ್ಲಿ
ಮಾತ್ರ ಯಂತ್ರಗಳು
ಹಿಂದೆ ಮುಂದೆ
ಆಚೆ ಈಚೆ ಎಲ್ಲ
ಅಕ್ಕ ಪಕ್ಕದ ಕಾಲುದಾರಿಯಲ್ಲಂತೂ
ಎದ್ದು ಬಿದ್ದು ಚಲಿಸುತ್ತಿದ್ದರೆ
ಅಲ್ಲಲ್ಲೆ ಬಿದ್ದು ನರಳುತ್ತಲೂ
ಇದ್ದಾರೆ ಹಲಕೆಲವರು
ಹಾಡಿ ನ್ಯಾಯದ ಬಂಟರು
ಯಾರೊಬ್ಬರೂ ಪಕ್ಕದ ರಾಜ ಮಾರ್ಗಕ್ಕೆ
ಹೋಗಲಿಚ್ಚಿಸುವುದೇ ಇಲ್ಲ
ವಿಚಿತ್ರದ ಸಂಗತಿ ಎಂದರೆ

ಆಚೆಯವರೆಲ್ಲ ಮೊದಲು
ಇಲ್ಲಿಯೂ ಇದ್ದರು
ಈಗ ನೆನಪಿಲ್ಲ ಅಷ್ಟೇ

ಬಂದಳಿಕೆ

ಮೊದಲೊಮ್ಮೆ
ಅಪರೂಪದ
ಗಿಡವೊಂದು
ಕಣ್ಣಿಗೆ ಬಿತ್ತು
ಹಾಗೆಯೇ ಬಿಡಲು
ಮನಸ್ಸಾಗದೇ
ಎತ್ತಿ ತಂದು
ಜೋಪಾನವಾಗಿ
ಮನೆಯೊಳಗೆ
ಇಟ್ಟು ಪೋಷಿಸಿದೆ
ಈಗ ಅದೇ
ನನ್ನೆಲ್ಲವನ್ನೂ
ಅಪೋಷಣೆಯಾಗಿಸಿದೆ
ಸ್ವಂತಿಗೆಗೆ
ಆಸ್ಪದವೇ
ಇಲ್ಲದಂತೆ ಆವರಿಸಿ
ಬೆಳೆದು ಬಿಟ್ಟಿದೆ
ಸಾರ್ವತ್ರಿಕವಾಗಿಬಿಟ್ಟಿದೆ!!
ಈಗ ನಾನೇ
ಅನ್ವೇಷಣೆಯಲ್ಲಿದ್ದೇನೆ
ನೆಮ್ಮದಿಯಿಂದಿರಲು ನೆಲ
ಮೇಲೊಂದು ಸೂರು